ಕಲಬುರಗಿ: ಕಳೆದ ಎರಡು ದಿನಗಳಿಂದ ತುಸು ನಿರಾಳವಾಗಿದ್ದ, ಕೊರೋನಾ ಇಂದು ಮತ್ತೆ ತನ್ನ ಪ್ರತಾಪ ಮೆರೆದಿದೆ. ಇಂದು ಮತ್ತೆ ಇಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ.
ನಗರದ ರೋಗಿ ಸಂಖ್ಯೆ P425 ದ್ವೀತಿಯ ಸಂಪರ್ಕದಿಂದ 7 ವರ್ಷದ ಮಗು ಮತ್ತು ರೋಗಿ P422 ಯಿಂದ 65 ವರ್ಷದ ಮಹಿಳೆಗೆ ಸೋಂಕು ತಗುಲಿರುವುದಾಗಿ ದೃಢಪಟ್ಟಿದೆ.
ಇದರಿಂದ ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ ಕೊರೋನಾ ಪಾಸಿಟಿವ್ ಪತ್ತೆಯಾದ 38 ಜನರಲ್ಲಿ ಒಟ್ಟು 7 ಜನ ರೋಗಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 4 ಜನ ಸೋಂಕಿಗೆ ಬಲಿಯಾಗಿದ್ದು, 27 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೀಡಿತರೆಲ್ಲರನ್ನು ನಿಗದಿತ ಇ.ಎಸ್.ಐ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.