7 ವರ್ಷದ ಮಗು ಸೇರಿ ಇಬ್ಬರಿಗೆ ಸೋಂಕು ಪಾಜಿಟಿವ್

0
160

ಕಲಬುರಗಿ: ಕಳೆದ ಎರಡು ದಿನಗಳಿಂದ ತುಸು ನಿರಾಳವಾಗಿದ್ದ, ಕೊರೋನಾ ಇಂದು ಮತ್ತೆ ತನ್ನ ಪ್ರತಾಪ ಮೆರೆದಿದೆ. ಇಂದು ಮತ್ತೆ ಇಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ.

ನಗರದ ರೋಗಿ ಸಂಖ್ಯೆ P425 ದ್ವೀತಿಯ ಸಂಪರ್ಕದಿಂದ 7 ವರ್ಷದ ಮಗು ಮತ್ತು ರೋಗಿ P422 ಯಿಂದ 65 ವರ್ಷದ ಮಹಿಳೆಗೆ ಸೋಂಕು ತಗುಲಿರುವುದಾಗಿ ದೃಢಪಟ್ಟಿದೆ.

Contact Your\'s Advertisement; 9902492681

ಇದರಿಂದ ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ ಕೊರೋನಾ‌ ಪಾಸಿಟಿವ್ ಪತ್ತೆಯಾದ 38 ಜನರಲ್ಲಿ ಒಟ್ಟು 7 ಜನ ರೋಗಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 4 ಜನ ಸೋಂಕಿಗೆ ಬಲಿಯಾಗಿದ್ದು, 27 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೀಡಿತರೆಲ್ಲರನ್ನು ನಿಗದಿತ ಇ.ಎಸ್.ಐ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here