ಸೇಡಂ: ಇಂದು ತಾಲ್ಲೂಕಿನ ನೀಲಹಳ್ಳಿ ಗ್ರಾಮದಲ್ಲಿ ಕಡು ಬಡವರಿಗೆ ,ನಿರ್ಗತಿಕರಿಗೆ 200 ಆಹಾರ ಧಾನ್ಯ ಕಿಟ್ ಗಳನ್ನು ಕಾಗಿನ ಜನಸೇವ ಟ್ರಸ್ಟ್ ನ ವ್ಯವಸ್ಥಾಪಕರಾದ ಚಂದಮ್ಮ ಅಂಬಲಗಿ ನೀಡಿದರು.
ಕರೋನಾ ಮಹಾಮರಿಯಿಂದ ಇಡೀ ದೇಶವೇ ತತ್ತರಿಸಿದೆ ಇದರ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯು ಕಾಗಿನ ಜನಸೇವಾ ಟ್ರಸ್ಟ್ ವತಿಯಿಂದ ಕಂಪನಿಯು ಸುತ್ತಮುತ್ತಲಿನ ಹಳ್ಳಿಗಳಲ್ಲಿ ದಿನಬಳಕೆಯ ಆಹಾರ ಧಾನ್ಯ ಕಿಟ್ ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆಯತ್ತಿದ್ದಾರೆ.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ್ ಸಾವು, ಮಂಜುನಾಥ್ ಸಾವು, ಗ್ರಾಮದ ಮುಖಂಡರಾದ ಗಣೇಶ್ ಕಂಬಾರ್, ಶಿವರುದ್ರ ಕಟ್ಟಿಮನಿ,ಅನಂತನಾಗ ಕಟ್ಟಿಮನಿ, ಶರಣು ಜಮಾದಾರ್, ಶಬ್ಬೀರ್, ಕಾರ್ಯ ಸೇವಕರಾದ ಶ್ರೀಮತಿ. ಕಾಶಿಬಾಯಿ ದಿಗ್ಗಾಂವ ,ಶ್ರೀಮತಿ ಮಾಯಾವತಿ , ಸೋಮಶೇಖರ ಮತ್ತು ಊರಿನ ಮುಖಂಡರು ಪಾಲ್ಗೊಂಡಿದ್ದರು.
- ಶಪೀಕ್ ಊಡಗಿ