ಸೇಡಂ: ದೇಶದಲ್ಲಿ ಕರೋನಾ ವ್ಯಾಪಕವಾಗಿ ಹರಡುತಿದೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು , ಕಲಬುರಗಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಪಟ್ಟಣದ ಸಿಮೆಂಟ್ ಕಾರ್ಖಾನೆ ಇಂತಹ ಸಮಯದಲ್ಲಿ ಆರಂಭಿಸಿಲು ಆದೇಶ ನೀಡಿದ್ದು , ಕೊರೋನಾ ಮಾಹಾಮಾರಿಗೆ ಆಹ್ವಾನ ನೀಡಿದಂತೆ ಆಗಿದೆ ಎಂದು ಕರವೇ ಅಧ್ಯಕ್ಷ ಅಂಬರೀಷ ಊಡಗಿ ಆತಂಕ ವ್ಯಕ್ತಪಡಿಸಿದ್ದಾರೆ.
ಕಂಪನಿಯಲ್ಲಿ ಕಾರ್ಮಿಕರು ಸಮಾಜಿಕ ಅಂತರ ಕಾಯ್ದುಕೊಳ್ಳದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದಿಂದ ,ಬೇರೆಬೇರೆ ರಾಜ್ಯದ ಸ್ಥಳಗಳಿಂದ ಸಂಚಾರ ಪ್ರಾರಂಭಗೊಂಡು ಅವರಿಂದ ಸೋಂಕು ತಗುಲುವ ಸಾದ್ಯತೆ ಇದೆ, ಅದಕ್ಕಾಗಿ ತಕ್ಷಣವೇ ಕಾರ್ಖಾನೆಗಳ ಕಾರ್ಯಾ ಸ್ಥಗಿತಗೋಳಸಬೇಕೆಂದು ಆಗ್ರಹಿಸಿದ್ದಾರೆ.
ತಾಲೂಕಿನಲ್ಲಿ ಯಾವುದೇ ಸೋಂಕು ತಗುಲಿರುವುದು ಕಂಡು ಬಂದಿಲ್ಲ, ತಕ್ಷಣವೇ ಕಾರ್ಖಾನೆಗಳ ಕಾರ್ಯಾ ಸ್ಥಗಿತಗೋಳಸಬೇಕು, ದಿನಬಳಕೆಯ ವಸ್ತುಗಳು, ಕಿರಾಣಾ ಅಂಗಡಿಗಳು ಡಬಲ್ ದರ ದುಡ್ಡು ವಸುಲಿ ಮಾಡುತ್ತಿದ್ದು, ಬಡವರು ಏನಾದರೂ ಖರೀದಿ ಮಾಡುವುದ್ದಾದರೆ ಕಣ್ಣಿರು ಕಪ್ಪಾಳಿಗೆ ಬರುವಂತಹ ಪರಿಸ್ಥಿತಿ ಉಂಟಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಇತ ಕಡೆ ಹೆಚ್ಚಿನ ಗಮನ ಹರಿಸಿ ಅಂತವರು ವಿರುದ್ಧ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಂದು ಹೇಳಿದರು.
ಶಪೀಕ್ ಊಡಗಿ