ಕಲಬುರಗಿ: ನಗರದ ರೋಟರಿ ಕ್ಲಬ್ ಆವರಣದಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ಎಸ್ಎಸ್ ಸಂಚಾಲಿತ ಸೇವಾ ಭಾರತಿ ಟ್ರಸ್ಟ್ ವತಿಯಿಂದ ವಕೀಲರಿಗೆ ಆಹಾರ ಧಾನ್ಯ ವಿತರಿಸಲಾಯಿತು. ಟ್ರಸ್ಟ್ನ್ ಅಧ್ಯಕ್ಷ ರಮೇಶ ತಿಪ್ಪನೂರ, ಸಂಘದ ಪ್ರಮುಖರಾದ ಶ್ರೀನಿವಾಸ ನಾಯಕ, ಕೃಷ್ಣಾಜಿ ಜೋಶಿ, ರಾಘವೇಂದ್ರ ಕುಲಕರ್ಣಿ ಕೋಗನೂರ ವಕಿಲರು, ಸುರೇಶ ಪಾಟಿಲ್ ಜೋಗುರ, ಈರಣ್ಣಾ ಗೋಳೆದ, ಶಾಂತು ಬಡಿಗೇರ, ಹಣಮಂತ ಯಳಸಂಗಿ, ಸಂಧ್ಯಾರಾಜ ಸ್ಯಾಮುವೆಲ್, ಶರಣು ಪಸ್ತಾಪೂರ ಇದ್ದರು.