ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಪಿತೂರಿ ನಡೆಸಿದ ಬಿಜೆಪಿ ಪಕ್ಷ ನೀತಿಗೆ ಬಿಎಸ್‍ಪಿ ಖಂಡನೆ

1
333

ಕಲಬುರಗಿ: ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಪಿತೂರಿ ನಡೆಸಿದ ಬಿಜೆಪಿ ಪಕ್ಷದ ನೀತಿಯನ್ನು ಖಂಡಿಸುತ್ತೇವೆ ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ವಿಜಯಕುಮಾರ ಓಕಳಿ ಅವರು ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಕಳೆದ 7-8 ತಿಂಗಳಿಂದ ಜಿಲ್ಲಾಧಿಕಾರಿ ಬಿ.ಶರತ್ ಅವರ ಬಹಳ ಯಶಸ್ವಿಯಾಗಿ ಆಡಳಿತ ವೈಖರಿಯನ್ನು ನಡೆಸಿಕೊಂಡು ಬಂದಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಕಳೆದ ಫೆಬ್ರುವರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಸರಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಸಹಕಾರ ದೊರೆಯದೇ ಇದ್ದರೂ ಕೂಡ ಇಡೀ ರಾಜ್ಯದಲ್ಲಿ ಇತಿಹಾಸ ಸೃಷ್ಟಿಸಿದ ಸಾಹಿತ್ಯ ಸಮ್ಮೆಳನದ ಹಿಂದೆ ಜಿಲ್ಲಾಧಿಕಾರಿ ಬಿ. ಶರತ್ ಅವರ ಪರಿಶ್ರಮ ಬಹಳಷ್ಟಿತ್ತು ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಷಯವಾಗಿದೆ ಎಂದರು.

Contact Your\'s Advertisement; 9902492681

ಕೋವಿಡ್-19ಗೆ ಇಡೀ ದೇಶದಲ್ಲಿಯೇ ಮೊದಲನೆ ಬಲಿ ಕಲಬುರಗಿಯಲ್ಲಿ ಆದಾಗ, ಜಿಲ್ಲೆಯ ಜನಕ್ಕೆ ಆತಂಕವಾಗಿತ್ತು. ಆ ಸಂದರ್ಭದಲ್ಲಿ ಅದನ್ನು ಬಹಳ ಯಶಸ್ವಿಯಾಗಿ ತಮ್ಮ ಆಡಳಿತ ವೈಖರಿಯಿಂದ ಸಾಧ್ಯವಾದಷ್ಟು ನಿಯಂತ್ರಣಕ್ಕೆ ತರಲಾಯಿತು. ಜಿಲ್ಲೆಯಲ್ಲಿ ಲಾಕ್‍ಡೌನ್‍ದಿಂದ ಜನ ಜೀವನ ಅಸ್ತವ್ಯಸ್ಥವಾಗಿದ್ದು, ಜನರು ಸಮಸ್ಯೆಯನ್ನು ಆಲಿಸಿ ಅವರ ಸಮಸ್ಯೆಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಅದರಲ್ಲೂ ಆಡಳಿತಾರೂಢ ಬಿಜೆಪಿ ಪಕ್ಷದ ಶಾಸಕರು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಜಿಲ್ಲಾಧಿಕಾರಿಗಳ ವರ್ಗಾವಣೆ ಪಿತೂರಿ ನಡೆಸಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ವಿಜಯಕುಮಾರ ಓಕಳಿ ತಿಳಿಸಿದ್ದಾರೆ.

ಕೋವಿಡ್-19 ತಡೆಗಟ್ಟಲು ಆಡಳಿತ ಸರಕಾದಿಂದ ಹೊಸ-ಹೊಸ ಯೋಜನೆಗಳನ್ನು, ಹಣಕಾಸಿನ ಅನುದಾನವನ್ನು, ರೋಗ ಪತ್ತೆ ಹಚ್ಚುವ ಲ್ಯಾಬ್ ಕೇಂದ್ರಗಳನ್ನು ಜಿಲ್ಲೆಗೆ ತರುವಲ್ಲಿ ಇಲ್ಲಿನ ಜಿಲ್ಲಾಡಳಿತಕ್ಕೆ ಸಹಕರಿಸುವಲ್ಲಿ ಇಲ್ಲಿನ ಎಲ್ಲಾ ಶಾಸಕರು ವಿಫಲರಾಗಿದ್ದಾರೆ. ಇದನ್ನು ಮರೆಮಾಚಲು ಬಿಜೆಪಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ಸಂಸದರಾದ ಉಮೇಶ ಜಾಧವ, ಮಾಜಿ ಮಂತ್ರಿಗಳಾದ ಮಾಲಿಕಯ್ಯಾ ಗುತ್ತೇದಾರ, ಹಾಗೂ ಬಾಬುರಾವ ಚಿಂಚನಸೂರ್, ಇತರೆ ಬಿಜೆಪಿ ಮುಖಂಡರು ತಮ್ಮ ಸ್ವಾರ್ಥ ಲಾಭಕ್ಕಾಗಿ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಪಿತೂರಿ ನಡೆಸಿರುವುದು ಬಹಳ ಖಂಡನೀಯ ವಿಷಯವಾಗಿದೆ. ದಿಢೀರ್ ಈ ರೀತಿಯ ವರ್ಗಾವಣೆ ಮಾಡಿ ಮತ್ತೇ ದಿಢೀರನೇ ಮುಂದುವರೆಯುವಂತೆ ಆದೇಶಿಸಿರುವುದರ ಹಿನ್ನೆಲೆ ಜಿಲ್ಲೆಯ ಜನತೆಗೆ ಬಹಿರಂಪಡಿಸಬೇಕೆಂದು ಬಹುಜನ ಸಮಾಜ ಪಕ್ಷ ಒತ್ತಾಯಿಸುತ್ತದೆ ಎಂದು ಓಕಳಿ ತಿಳಿಸಿದರು.

ಜೊತೆಗೆ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಪಡಿತರ ಚೀಟಿ ಇಲ್ಲದವರಿಗೆ ರೇಷನ್ ಕೊಡುವ ಬಗ್ಗೆ ಮತ್ತು ಲಾಕ್‍ಡೌನ್‍ಗೆ ಒಳಪಟ್ಟಿರುವ ಅನೇಕ ಬಡ ಕುಟುಂಬಗಳಿಗೆ ಸಹಕರಿಸುವಂತಹ ನಿಟ್ಟಿನಲ್ಲಿ ಇಲ್ಲಿನ ಆಡಳಿತ ಪಕ್ಷದ ಕಾರ್ಯಕರ್ತರು ಕಾರ್ಯನಿರ್ವಹಿಸಬೇಕು. ಕೋವಿಡ್-19 ತಡೆಗಟ್ಟುವಲ್ಲಿ ಎಲ್ಲಾ ಪಕ್ಷದ ಕಾರ್ಯಕರ್ತರು ಪಕ್ಷಾತೀಥವಾಗಿ ಜಿಲ್ಲಾಡಳಿತಕ್ಕೆ ಸಹಕಾರ ನೀಡುವಂತೆ ಬಹುಜನ ಸಮಾಜ ಪಕ್ಷವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ನಿಂಬಾಳಕರ್, ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾದೇವ.ಬಿ.ಧನ್ನಿ. ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಎಲ್.ಆರ್.ಭೋಸಲೇ, ಡಾ. ಅನೀಲ್ ತೆಂಗಳಿ, ಜೈಭೀವi ಸಿಂಧೆ, ಗೋರಖನಾಥ ದೊಡ್ಡಮನಿ, ಯಲ್ಲಪ್ಪ ಛಲವಾದಿ, ಮುನೀರ ಶೇಖ, ಶರಣು ಹಂಗರಗಿ, ಉಮೇಶ ಶೃಂಗೆರಿ ಸೇರಿದಂತೆ ಇನ್ನಿತರರು ಇದ್ದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here