ಆಳಂದ; ಸಮಾನ ಕೆಲಸಕ್ಕೆ ಸಮಾನ ವೇತನ ಎನ್ನುವ ಕೋರ್ಟ ಆದೇಶ ಮಾತ್ರ ಕಾಗದದಲ್ಲೆ ಉಳಿದ್ದು ಸರಕಾದ ವಿವಿಧ ಇಲಾಖೆಗಳಲ್ಲಿ ಅದೇಷ್ಟೋ ನೌಕರರು ಯಾವುದೆ ಸರಕಾರ ಭದ್ರತೆ ಇಲ್ಲದೆ ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಿದ್ದಾರೆ. ಸರಕಾರ ಮಾತ್ರ ಇವರ ಬಗ್ಗೆ ಸಂಪೂರ್ಣ ನಿರ್ಲಕ್ಷ ವಹಿಸಿದ್ದರಿಂದ ಇದೆ ಉದ್ಯೋಗವನ್ನೆ ನಂಬಿ ಬದುಕುತ್ತಿರುವ ಕುಟುಂಬಗಳು ಅಕ್ಷರಸಃ ಬೀದಿಗೆ ಬಿದ್ದಿವೆ ಸರಕಾರ ಇವರ ಬಗ್ಗೆ ಯಾವುದೆ ಕಾಳಜಿ ತೋರಿಸುತ್ತಿಲ್ಲ ಎಂದು ಕಲಬುರಗಿ ಆಯುಷ್ಯ ವೈದ್ಯರ ಸಂಘದ ಜಿಲ್ಲಾ ಅಧ್ಯಕ್ಷ ಡಾ. ಅತ್ತಾರ ಜಮೀಲ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕೊರನಾ ಹೋರಾಟದಲ್ಲಿ ಇಂದು ಅತ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿರುವುದು ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಪ್ರಾಣವನ್ನೆ ಒತ್ತೆಯಿಟ್ಟು ಸೊಂಕು ಪಡೀತ ಆಸ್ತತ್ರೆಗಳಲ್ಲಿ ಹಗಲು ರಾತ್ರಿ ಎನ್ನದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕದಲ್ಲಿ ಒಟ್ಟು ೬೪೦ ಆಯುಷ್ಯ ವೈದ್ಯರು ೧೪ ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಕಲಬುರಗಿಯಲ್ಲಿ ೪೦ ಜನರಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರ ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಸೇರಿದಂತೆ ವಿವಿಧ ಕಡೆ ಕೆಲಸ ಮಾಡುತ್ತಿದ್ದಾರೆ ಎಂದರು.
ಇವರಷ್ಟೆ ಕೆಲಸ ಮಾಡುವ ಎಂ.ಬಿ.ಬಿ.ಎಸ್ ವೈದ್ಯರು ಇದ್ದಾರೆ. ಆದರೆ ಅವರಿಗೂ ಇವರಿಗೂ ವೇತನದಲ್ಲಿ ತಾರತಮ್ಯ ಸರಕಾರ ಮಾಡುತ್ತಿದೆ, ಆಯುಷ್ಯ ವೈದ್ಯರಿಗೆ ೨೦೩೦೦ ರೂ ಎಂ.ಬಿ.ಬಿಎಸ್. ವೈದ್ಯರಿಗೆ ೪೫೦೦೦ರೂ ಸಾವಿರ ಸಂಬಳ ನೀಡುತ್ತಿದೆ. ಎನ.ಆರ್.ಎಚ್.ಎಂ ಯೋಜನೆಯ ಅಡಿ ನೇಮಕಗೊಂಡು ಕಳೆದ ೧೪ ವರ್ಷಗಳಿಂದ ದುಡಿಯುತ್ತಿದ್ದಾರೆ ಆದರೆ ಸರಕಾರ ಮಾತ್ರ ಯಾವುದೆ ಸೇವಾ ಭದ್ರತೆ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ನಮ್ಮನ್ನೆ ನಂಬಿದ ಕುಟುಂಬಗಳಿವೆ ಇದನ್ನೆ ನಂಬಿ ಜೀವನ ಮಾಡುತ್ತಿರುವ ನಮಗೆ ನೀವು ಕೊಡುವ ೨೦೩೦೦ರೂ ಯಾವುದಕ್ಕೂ ಸಾಕಗುತ್ತಿಲ್ಲ ಕಳೆದ ೧೪ ವರ್ಷದಿಂದ ಇದೆ ಕಡಿಮೆ ಸಂಬಳದಿಂದ ದುಡಿಯುತ್ತಿದ್ದು ಕೆಲವರು ವಯೋ ನಿವೃತ್ತಿ ಅಂಚಿನಲ್ಲಿದ್ದಾರೆ. ಸರಕಾರ ನಮ್ಮ ಸೇವೆಯನ್ನು ಗುರುತಿಸಿ ತಕ್ಷಣ ವೇತನ ಹೆಚ್ಚಳ ಮಾನವಿತೆಯ ಮೇಲೆ ಖಾಯಂ ಗೋಳಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ.