ಕಲಬುರಗಿ: ಡಿಸಿಎಂ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ನಗರದ ರೇಡ್ ಝೋನ್ ಪ್ರದೇಶಗಳಿಗೆ ಭೇಟಿ ನೀಡಿರುವ ವೇಳೆ ಸ್ಥಳೀಯ ಮುಖಂಡರೊಂದಿಗೆ ಮಾತಿನ ಚಕಮಕಿ ವಿಕೋಪಕ್ಕೆ ಕಾರಣವಾಯಿತು.
ಇಂದು ಮುಸ್ಲಿಂ ಚೌಕ್ ಪ್ರದೇಶದಲ್ಲಿರುವ ರೆಡ್ ಝೋನ್ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಜಿಲ್ಲೆಯಲ್ಲಿ ಕೊರೊನಾ ಮತ್ತು ಲಾಕ್ ಡೌನ್ ನಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿ ತುತು ಅನ್ನಕ್ಕೂ ಗತ್ತಿಇಲ್ಲದ ನರಳುತ್ತಿದ್ದು, ಉಸ್ತುವಾರಿ ಸಚಿವರು ಮೂರನೇ ಬಾರಿ ಜಿಲ್ಲೆಗೆ ಆಗಮಿಸಿದ ಈ ಕಡೆಗೆ ಭೇಟಿ ನೀಡಿದಿರುವ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ಸ್ಥಳೀಯ ಮುಖಂಡರು ಪ್ರಶ್ನಿಸಿದರು.
ಇದರಿಂದ ಕೋಪಗೊಂಡ ಸಚಿವ ಕಾರಜೋಳ ಮುಖಂಡರನ್ನು ಹೊರಗೆ ಹೋಗಲು ಆದೇಶಿದರು, ಸ್ಥಿತಿ ವಿಕೋಪ ತಿರುಗಿದರಿಂದ ಸಚಿವರು ರೇಡ್ ಝೋನ್ ಪ್ರದೇಶದಿಂದ ಕೆಲವೇ ನಿಮಿಷಗಳಲ್ಲಿ ವಾಪಸ್ ತೆರಳಿರುವ ಸನ್ನಿವೇಶ ನಡೆಯಿತು.
ಮಹಾಮಾರಿ ಕೊರೊನಾ ಜಿಲ್ಲೆಯ ಐವರ ಬಲಿ ಪಡೆದಿದೆ, ಪೀಡಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಜನರು ಲಾಕ್ ಡೌನ್ ನಿಂದಗಾಗಿ ಬಡವರು ಕೂಲಿ ಕಾರ್ಮಿಕರು ಗಂಭೀರ ಸ್ಥಿತಿಯಲಿದರೂ ಉಸ್ತುವಾರಿ ಸಚಿವರು ನಿರ್ಲಕ್ಷ್ಯ ತೊರುತ್ತಿದ್ದಾರೆ ಕೂಡಲೇ ಕಾರಜೋಳ ಅವರನ್ನು ಉಸ್ತುವಾರಿ ಸಚಿವ ಸ್ಥಾನದಿಂದ ವಜಾಗೊಳಿಸಿ, ಸ್ಥಳೀಯ ಶಾಸಕರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡಬೇಕೆಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.
ಉಸ್ತುವಾರಿ ಸಚಿವ ಜಿಲ್ಲೆಯ ಜವಾಬ್ದಾರಿ ನಿಭಾಯಿಸುವಲಿ ನಿರ್ಲಕ್ಷ್ಯ ತೊರುತ್ತಿದ್ದು, ಈ ಭಾಗದ ಸಂಕಷ್ಟ ನಿವಾರಣೆಗೆ ಸ್ಥಳೀಯ ಶಾಸಕರಾದ ದತ್ತಾತ್ರೇಯ ಸಿ ಪಾಟೀಲ ರೇವೂರ್ ಅವರಿಗೆ ಉಸ್ತುವಾರಿ ಸಚಿವ ಸ್ಥಾನ ನೀಡಬೇಕು. – ಕಾಂಗ್ರೆಸ್ ಮುಖಂಡ ಮಝರ್ ಆಲಂ ಖಾನ್, ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಉಸ್ತಾದ್, ರಹಿಮ್ ಮಿರ್ಚಿ ಹಾಗೂ ಡಾ.ಮಹಮ್ಮದ್ ಅಜಗರ ಚುಲಬುಲ್ ಅವರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕಲಬುರಗಿ ಉತ್ತರ ಮತ ಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ, ಸಂಸದ ಉಮೇಶ್ ಜಾಧವ್, ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ, ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮುಡ, ಚಿಂಚೋಳಿ ಕ್ಷೇತ್ರದ ಶಾಸಕ ಅವಿನಾಶ್ ಜಾಧವ್, ಜಿಲ್ಲಾಧಿಕಾರಿ ಶರತ್ ಬಿ. ಪೊಲೀಸ್ ಆಯುಕ್ತರಾದ ಶತೀಶ್ ಕುಮಾರ, ಉಪ ಪೊಲೀಸ್ ಆಯುಕ್ತರಾದ ಕಿಶೋರ್ ಬಾಬು ಸೇರಿದಂತೆ ಮುಂತಾದವರು ಇದ್ದರು.