ಸುರಪುರ: ಕೊರೊನಾ ಲಾಕ್‍ಡೌನ್ ಘೋಷಣೆಯಾದಾಗಿನಿಂದ ಬಡ ಜನತೆಗೆ ದುಡಿಯಲು ಕೆಲಸವಿಲ್ಲದೆ,ಮನೆಯ ನಿರ್ವಹಣೆಗೆಉ ಕಷ್ಟಪಡುವಂತಾಗಿದೆ.ಅಂತಹ ಬಡ ಕುಟುಂಬಗಳು ಕಷ್ಟ ಪಡದಿರಲೆಂದು ಟೀಂ ರಾಜುಗೌಡ ಸೇವಾ ಸಮಿತಿಯಿಂದ ನಿತ್ಯವು ಆಹಾರ ಮತ್ತು ದಿನಸಿಗಳ ಕಿಟ್ ವಿತರಿಸಲಾಗುತ್ತಿದೆ ಎಂದು ಕಲಬುರ್ಗಿ ವಿವಿ ಸಿಂಡಿಕೇಟ್ ಸದಸ್ಯ ಗಂಗಾಧರ ನಾಯಕ ಮಾತನಾಡಿದರು.
ನಗರದ ಹಸನಾಪುರದಲ್ಲಿನ ಅನೇಕ ಬಡ ಕುಟುಂಬಗಳಿಗೆ ಅಕ್ಕಿ ಬೇಳೆ ಅಡುಗೆ ಎಣ್ಣೆ ಮತ್ತಿತರೆ ಅಗತ್ಯ ವಸ್ತುಗಳ ದಿನಸಿ ಕಿಟ್ ವಿತರಿಸಿ ಮಾತನಾಡಿ,ಕ್ಷೇತ್ರದ ಯಾವುದೇ ಕುಟುಂಬಗಳು ಕೊರೊನಾ ದಿಂದ ತೊಂದರೆ ಅನುಭವಿಸದಿರಲೆಂದು ಶಾಸಕ ನರಸಿಂಹ ನಾಯಕ (ರಾಜುಗೌಡ)ರ ಮಾರ್ಗದರ್ಶನದಲ್ಲಿ ತಾಲೂಕಿನಾದ್ಯಂತ ನಿತ್ಯವು ನೂರಾರು ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಗುತ್ತಿದೆ ಎಂದರು.
ಬೆಳಿಗ್ಗೆ ನಡೆದ ದಿನಸಿ ವಿತರಣೆ ಕಾರ್ಯಕ್ರಮದಲ್ಲಿ ಅನೇಕ ಕುಟುಂಬಗಳ ಮನೆ ಬಾಗಿಲಿಗೆ ಹೋಗಿ ಕಿಟ್‍ಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಪರಶುರಾಮ ನಾಟೇಕಾರ್, ಲಕ್ಷ್ಮಣ ಕವಡಿಮಟ್ಟಿ,ಪವನ ವಿಭೂತಿ, ಆಕಾಶ,ಚೇತನ್ ಕುಮಾರ್, ಧನ್ನಪ್ಪ ಸಾಹುಕಾರ್,ಚೆನ್ನಪ್ಪ ಮಾಚನೂರ್, ಹಣಮಂತ ಗುಜಲರ್,ಚನ್ನಪ್ಪ ಪೊಲೀಸ್ ಪಾಟೀಲ್, ಕೊಟ್ರೇಶ ಸ್ವಾಮಿ,ಶಿವಶಂಕರಪ್ಪ,ಶ್ರವಣ,ಶರಣಗೌಡ ಪಾಟೀಲ, ಹುಲಗಪ್ಪ,ಸಿದ್ದಯ್ಯ ಪಾಟೀಲ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.