ನಾಗಮಂಗಲ ಬೆಳೆ ಹಾನಿ ಪ್ರದೇಶಕ್ಕೆ ಶಾಸಕ ಸುರೇಶ್ ಗೌಡ ಭೇಟಿ

0
30

ನಾಗಮಂಗಲ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆ ಹಾನಿಯಾದ ರೈತರ ಜಮೀನಿಗೆ ಭೇಟಿ ನೀಡಿ ಶಾಸಕ ಸುರೇಶ್ ಗೌಡ ಹಾನಿಗೊಳಗಾದ ಬೆಳೆ ವೀಕ್ಷಿಸಿ ರೈತನಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಹಣ ನೀಡಿ ಸಂತೈಸಿದರು

ತಾಲೂಕಿನ ಹೋಣಕೆರೆ ಹೋಬಳಿಯ ಎ ಶಾನ್ ಭೋಗನಹಳ್ಳಿ ಮರಿಗೌಡ ರೈತನಿಗೆ ಸೇರಿದ ಜಮೀನಿನಲ್ಲಿ ಏಳು ಲಕ್ಷ ರೂಪಾಯಿ ಬೆಲೆಬಾಳುವ ಬಾಳೆ ತೋಟ ನಾಶವಾಗಿದ್ದು ಶಾಸಕರು ವೈಯಕ್ತಿಕವಾಗಿ
ಒಂದು ಲಕ್ಷ ರೂಪಾಯಿ ಪರಿಹಾರ ನೀಡಿದರು ಸಾಮಕಹಳ್ಳಿ ಗ್ರಾಮದ ರೈತರಾದ ಜಯರಾಮು ಮತ್ತು ಉದಯಕುಮಾರ್ ಜಮೀನಿನಲ್ಲಿ ಬೆಳೆದಿದ್ದ ಅಂತಹ ಟಮೋಟ ನಾಶವಾಗಿದ್ದು ತಲಾ ಐವತ್ತು ಸಾವಿರ ರೂಪಾಯಿ ಪರಿಹಾರ ನೀಡಲಾಯಿತು ಜೊತೆಗೆ ಇದೇ ಗ್ರಾಮದ ರಾಘವೇಂದ್ರ ಎಂಬುವರಿಗೆ ಸೇರಿದ ಜಮೀನಿನಲ್ಲಿ ಒಂದು ಎಕರೆ ಹೂವಿನ ತೋಟ ನಾಶವಾಗಿದ್ದು 50 ಸಾವಿರ ರೂಪಾಯಿ ಧನಸಹಾಯ ಮಾಡಲಾಯಿತು ನಂತರ ಕೆಬ್ಬೆ ಕೊಪ್ಪಲು ಗ್ರಾಮದ ರೈತರು ಬೆಳೆಗಳು ಸಾಕಷ್ಟು ಹಾನಿಗೊಳಗಾಗಿದ್ದು ಶಾಸಕರು ಖುದ್ದು ಸ್ಥಳ ಪರಿಶೀಲನೆ ನಡೆಸಿದರು ಇದೇ ಸಂದರ್ಭದಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಎಲೆಕೋಸು ಸೌತೆಕಾಯಿ ಬಿನಿಸು ಟಮೋಟೊ ತರಕಾರಿ ಬೆಳೆಗಳು ನಾಶವಾಗಿದ್ದು ಅಡಿಕೆ ಮರ ಮತ್ತು ತೆಂಗಿನ ಮರ ನೆಲಕ್ಕುರುಳಿದ ನ್ನು ಶಾಸಕರು ಸ್ಥಳ ಪರಿಶೀಲನೆ ನಡೆಸಿದರು

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸುರೇಶಗೌಡ ಈಗಾಗಲೇ ರಾಜ್ಯಾದ್ಯಂತ ಕರೋನ ವೈರಸ್ ಇರುವ ಹಿನ್ನೆಲೆ ರೈತರು ತಾವು ಬೆಳೆದಂತಹ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ ಇದೇ ಸಮಯದಲ್ಲಿ ಮನೆಯಿಂದ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದೆ ಸರ್ಕಾರದ ಯೋಜನೆಗಳು ಘೋಷಣೆಗಳಾಗಿ ಉಳಿದಿವೆ ಹೊರತು ಯಾವುದೇ ರೀತಿಯ ಸೌಲಭ್ಯಗಳು ರೈತನಿಗೆ ದೊರೆಯುತ್ತಿಲ್ಲ ಇನ್ನಾದರೂ ಸರ್ಕಾರ ರೈತರ ಪರ ನಿಲ್ಲಬೇಕೆಂದು ಮನವಿ ಮಾಡಿದರು

ಇದೇ ಸಂದರ್ಭದಲ್ಲಿ ಹೋಣಕೆರೆ ಕಸಬಾ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಅಶೋಕ್ ಎಪಿಎಂಸಿ ಅಧ್ಯಕ್ಷರಾದ ಚನ್ನಪ್ಪ ಪ್ರಥಮ ದರ್ಜೆ ಗುತ್ತಿಗೆದಾರರಾದ ಚನ್ನಕೇಶವ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here