ಕೊರೋನಾ ವೈರಸ್ ಅಟ್ಟಹಾಸದಿಂದ ಲಾಕ್‌ಡೌನ್ ಗೆ ರೀಲಿಫ ಅಂತೇ ಸರ್ಕಾರದವರು ಎಣ್ಣೆ ಅಂಗಡಿ ಓಪನ್ ಮಾಡೇ ಬಿಟ್ಟರು, ಕುಡುಕರಂತು ಲೈನ್ ಹಚ್ಚೇಬಿಟ್ರೂ ಛೇ.. ಛೇ.. ಇದೆಂತಹ ಸಮಸ್ಯೆ ರೀ ಅಣ್ಣಾ!. ರೇಷನ್ ತರಲಕ್ಕ ಹೋಗೋ ಅಂದ್ರಾ ಹೋಗೆ ಎವ್ವಾ ಅಂದೋರು ಬಾರ್ ಗೆ ಸರದಿ ಹಚ್ಚತಾರ ಏನಪ್ಪಾ, ನಮ್ಮ ಜನ ಹೊಟ್ಟೆಗೆ ಹಿಟ್ಟು ಇಲ್ಲಂದ್ರೂ ಪರವಾಗಿಲ್ಲ ಎಣ್ಣೆ ಕುಡಿಲಾರದು ಬಾಳ ದಿನಾ ಆಯ್ತು ಬಾಯಿ ಕಡಿಲತ್ತದ ಅಂತಾರ. ಜನರಲ್ಲಿ ದುಡ್ಡು ಇರದ ಹೊತ್ತಿನಲ್ಲಿ ಕೂಡ ಮದ್ಯಪಾನ ನಿಷೇಧಕ್ಕೆ ಸರ್ಕಾರವೇ ಬೆಂಬಲಿಸಲಿಲ್ಲ ಇನ್ನೇನು ಗಾಂಧಿಜೀ ಕನಸು ಅಲ್ಲಲ್ಲಾ ಇದು ಪ್ರತಿಯೊಬ್ಬ ಮಹಿಳೆಯರ ಕನಸ್ಸಾಗಿತ್ತು ಆದರೆ ನನಸಾಗದೇ ಮತ್ತೆ ಹಾಗೆಯೇ ಉಳಿಯಿತು.
(1) ಹೋಗ್ಲಿ ಬಿಡು ಅಣ್ಣಾ ಅಂತಾ ಒಬ್ಬನು ಹೇಳ್ದ – ಕುಡುಕರು ಬಿದ್ದರೂ ಎಬ್ಬಿಸೋರು ಇರಲಿಲ್ಲ ಈಗ ಕುಡುಕರೇ ದೇಶದ ಆರ್ಥಿಕತೆ ತುಂಬುತ್ತಿದ್ದಾರೆ ಗೊತ್ತಾ. ಅಬ್ಬಬ್ಬಾ ಮಹಾಶಯ ಭವಿಷ್ಯ ಇವನು ಅವರ ಪಾಟಿ೯ನೇ ಇರಬಹುದು ಅಂದು ಸುಮ್ಮನಾದೆ. ಕಿಸದಾಗ ಚಲೋ ನೂರು ರೂಪಾಯಿ ಇಲ್ಲ ದೇಶದ ಬೊಕ್ಕಸೆ ತುಂಬ್ತಾರಂತೆ ಮೊದಲು ನಿಮ್ಮ ಆಥಿ೯ಕ ಪರಿಸ್ಥಿತಿ ನೋಡೋಕೋ ರೀ ಎಪ್ಪಾ… ಸುಮಾರು ಭಾರತದಲ್ಲಿ ೫೦% ಸಂಸಾರಸ್ಥರು ಮತ್ತು ಯುವಕರು ಮದ್ಯದಿಂದಲೇ ಹಾಳಾಗುತ್ತಿದ್ದಾರೆ.
ಇದಕ್ಕೆಲ್ಲ ಸಕಾ೯ರ ಹೊಣೆಯೇ ಅದಕ್ಕಿಂತ ಮಿಗಿಲಾಗಿ ಅದು ನಮ್ಮೆಲ್ಲರ ಹೊಣೆ ಆಗಿದೆ ಬಂದುಗಳೇ. ದಿನ ನಿತ್ಯ ಜಗಳ, ಸಂಸಾರಗಳು ಕಣ್ಣೀರು ಹಾಕುತ್ತಿವೆ, ಅದೆಷ್ಟೋ ಕುಟುಂಬಗಳು ಬೀದಿಗೆ ಬಂದಿವೆ ಇದಕ್ಕೆ ನೇರ ಹೊಣೆ ಮಾಡುತ್ತಿರುವ ಮದ್ಯ ಸೇವನೆ. ಆದರೆ ಕರೊನಾ ಮಹಾಮಾರಿ ಬಂದು ಎಲ್ಲರ ಜೀವನ ಶೈಲಿ ಸಂಪೂರ್ಣ ಬದಲಾಯಿಸಿತು ಇದರಿಂದ ಸಂತಸ, ಖುಷಿ ಇಮ್ಮಡಿಯಾಯಿತು. ಒಂದಕಡೆ ಪ್ರತಿ ದಿನ ಕುಡಿದು ಗೋಳವೈಹಿಕೊತಿದ್ದ ಕುಟುಂಬದವರಿಗೂ ನೆಮ್ಮದಿ – ಸುಖ ಸಿಕ್ಕಿತ್ತು.
ಇನ್ನು ಕೆಲವು ಕಡೆ ಅನ್ನವಿಲ್ಲದೆ ಸಾಯುತ್ತಿರುವರು ಈಗ ಸರ್ಕಾರದ ಆಥಿ೯ಕತೆ ಕುಸಿಯುತ್ತಿದೆ ಬಾರ ಬಾಗಿಲಂತು ತೆರೆದಿದೆ. ಸಕಾ೯ರ ಕುಡಿಯಂತಾ ಹೇಳಿಲ್ಲ ಅದೂ ನಾವು ಮಾಡ್ತಾದ್ದಿವಿ ಬಿಟ್ಟುಬಿಡಿ ಆಗದಿದ್ರೂ ಬಿಟ್ಟುಬಿಡಿ. ಸಕಾ೯ರ ನಿಮಗೆ ಬಾ ಅಂತಾ ಒತ್ತಾಯ ಮಾಡ್ತಾ ಇದೆಯೇ ಇಲ್ಲಲ್ಲಾ ನೀವೇ ರೊಕ್ಕ ಕೊಟ್ಟು ಕುಡಿತ್ತಿದ್ದಿರಿ. ನಿಮಗಾಗಿ, ನಿಮ್ಮ ಕುಟುಂಬಕ್ಕಾಗಿ ಬಿಟ್ಟುಬಿಡಿ ಇವತ್ತೆ. ಸಕಾ೯ರ ಅದರ ಗಳಿಕೆ ಮಾಡ್ತಾದೆ ಅಷ್ಟೇ. (ಪ್ಯಾರಾ 2) ಜೀವನದಾಗ ತುಂಬಾ ಸಮಸ್ಯೆ ಬಂದಾವ ಅಣ್ಣಾ, , ನಿದ್ದಿನೇ ಬರ್ತಾಯಿಲ್ಲ, ಟೆನ್ಷನ್ ಇವೆಲ್ಲ ಎಲ್ಲರಿಗೂ ಮಾಮೂಲಿ ಇದ್ದಿದ್ದು .ಮನುಷ್ಯ ಅಂದ್ರ ಸಮಸ್ಯೆ ಇರುತ್ತಾವ ಹಂಗಂತಾ ಕುಡುದ್ರ ಬಗೆಹರಿಯುತ್ತದಾ ಏನ? ಮತ್ತಷ್ಟು ಹೆಚ್ಚು ಆಗ್ತಾದ. ಪ್ರತಿಯೊಂದು ಸಮಸ್ಯೆಗೆ ಪರಿಹಾರವಂತು ಇದ್ದೆ ಇರುತ್ತದೆ.
ಸಾರಾಯಿ ಇದಕ್ಕೆಲ್ಲ ಮದ್ದಲ್ಲ. ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ವಿಚಾರಮಾಡಿ, ಕಷ್ಟದಿಂದ ಪಾರಾಗಲು ಪ್ರಯತ್ನಿಸಿ. ನಿಮಗಿಂತ ಕುಟುಂಬವೇ ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಿದೆ ಒಮ್ಮೆ ಅವರ ಕಡೆ ತಿರುಗಿ ನೋಡಿ. ನಮ್ಮ ಭಾರತ ಯುವ ಶಕ್ತಿ ಅಂತಾ ಜಗತ್ತಿಗೆ ಗೊತ್ತು. ಆದರೆ ಶೋಚನೀಯ ಸಂಗತಿಯೆಂದರೆ ನಮ್ಮ ಯುವಜನತೆ ಕುಡಿಯೋ ಪ್ರತಿಶತದಲ್ಲೂ ಮೇಲುಗೈ. ಮೋಜು ಮಸ್ತಿಗಾಗಿ ಕುಡಿತ್ತಾರ,ಚಟಕ್ಕಾಗಿ ಇಲ್ಲೋ ಲವ್ವ ಫೆಲ್ಯೂರ್ ಅಂತಾ ಕುಡಿತ್ತಾರೋ ಸ್ನೇಹಿತರೆ ದಯವಿಟ್ಟು ಬಿಟ್ಟುಬಿಡಿ. ಒಮ್ಮೆ ನಿಮ್ಮ ತಂದೆ ತಾಯಿ ಕಷ್ಟ ಪಡುತ್ತಿರುವುದನ್ನು ನೋಡಿ ಯಿ
ಯಾರಿಗೋಸ್ಕರ ದುಡಿಯುತ್ತಿದ್ದಾರೆ ನಿಮ್ಮಗೊಸ್ಕರ ನಿವೇನು ಮಾಡುತ್ತಿದ್ದೀರಿ ಇದೇನಾ ಸರಿ. ಚಟಗಳಿಗೆ ದಾಸರಾಗದೇ ಜೀವನದಲ್ಲಿ ಸಾಧಿಸಿ. (ಪ್ಯಾರಾ 3) ವ್ಯಸನ ಮುಕ್ತ ಸಮಾಜಕ್ಕೆ ಅನೇಕ ಹೋರಾಟಗಾರರೂ, ಸ್ವಾಮಿಜಿಗಳು ಹಳ್ಳಿ ಹಳ್ಳಿಗಳಿಗೆ ತೆರಳಿ ಸುಧಾರಿಸುತ್ತಿದ್ದಾರೆ. ಆದರೆ ಸಿಟಿಗಳಲ್ಲಿ ಬಾರ್ ಗಳು ಮನೆ ಬಳಿಯೇ ಇವೇ ಮದ್ಯಕ್ಕಾಗಿ ಜನಜಂಗುಳಿ. ಒಂದಕಡೆ ದೇಶ ಮುನ್ನೆಡೆಯುತ್ತಿದೆ ಇನ್ನೊಂದೆಡೆ ಗಮನಕ್ಕೆ ಬಂದರೂ ಬಾರದಂತೆ ಹಿಂದೆ ಸಾಗುತ್ತಿದೆ. ಇಂತಹ ಸಮಯದಲ್ಲಿ ಪ್ರಜೆಗಳ ಪರಿಸ್ಥಿತಿ ಸಕಾ೯ರ ಗಮನಿಸ ಬೇಕು. ಈಗಲಾದರೂ ನಾವೆಲ್ಲರೂ ಎಚ್ಚೆತ್ತುಕೊಳ್ಳ ಬೇಕು, ಜನರೇ ಮದ್ಯಪಾನ ಬಿಟ್ಟು ಬಿಡಿ ಈಗಲೇ. ಜೀವ ಇದ್ದರೆ ಜೀವನ… ಮುಂದಿನ ದಿನಗಳಲ್ಲಿ ಆದ್ರೂ ವ್ಯಸನ ಮುಕ್ತ ಸಮಾಜಕ್ಕೆ ಸಕಾ೯ರ ಬೆಂಬಲಿಸಬೇಕು.
ಇಲ್ಲವಾದರೆ ಪ್ರಜೆಗಳೆ ಈ ಕೆಲಸ ಮಾಡುತ್ತಾರೆ. ದೇಶದ ಆರ್ಥಿಕತೆ ನಿಂತಿರುವುದು ಪ್ರಜೆಗಳ ಯೋಗ ಕ್ಷೇಮದ ಮೇಲೆ ಹೊರತು ಎಣ್ಣೆ ಮೇಲಲ್ಲ. ಆಥಿ೯ಕತೆಗಿಂತ ಆರೋಗ್ಯವೇ ಮುಖ್ಯ. ಬಿಟ್ಟುಬಿಡಿ ಎಣ್ಣೆ ಬಿಟ್ಟು ಬಿಡಿ… ವ್ಯಸನ ಮುಕ್ತ ಸಮಾಜಕ್ಕೆ ನಾವೆಲ್ಲರೂ ಕೈ ಜೋಡಿಸೋಣ.