ಸುರಪುರ: ದೇಶದಲ್ಲಿ ಕೋವಿಡ್-19 ಕಾರಣದಿಂದ ದೇಶದಲ್ಲಿ ಲಾಕ್‍ಡೌನ್ ಘೋಷಣೆಯಾಗಿದ್ದರಿಂದ ಲಕ್ಷಾಂತರ ಜನರು ಇಂದು ತೊಂದರೆಗೆ ಸಿಲುಕಿದ್ದಾರೆ.ಅದರಂತೆ ನಮ್ಮ ಸುರಪುರ ಮತಕ್ಷೇತ್ರದ ಅನೇಕ ತಾಂಡಾ ಮತ್ತು ಗ್ರಾಮಗಳ ಸಾವಿರಾರು ಜನರು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ ಸಿಲುಕಿದ್ದು ಅವರನ್ನು ಮರಳಿ ಕರೆ ತರಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಮನವಿ ಸಲ್ಲಿಸಿದರು.
ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಶಾಸಕರು,ಈಗಾಗಲೆ ಕೇಂದ್ರ ಸರಕಾರ ಕೂಡ ಹೊರ ರಾಜ್ಯದಲ್ಲಿರುವ ಗುಳೆ ಹೋದ ಕಾರ್ಮಿಕರು ಮರಳಿ ತಮ್ಮ ಊರುಗಳಿಗೆ ಬರಲು ಅನುಮತಿ ಹೊರಡಿಸಿದ್ದಾರೆ.ಆದರೆ ಮಹಾರಾಷ್ಟ್ರ ಗೋವಾದಲ್ಲಿರುವ ನಮ್ಮ ಕ್ಷೇತ್ರದ ಕಾರ್ಮಿಕರು ಕೆಲವಿಲ್ಲದೆ,ಕೈಯಲ್ಲಿ ಹಣವಿಲ್ಲದೆ ತೊಂದರೆಯಲ್ಲಿದ್ದಾರೆ.
ಆದ್ದರಿಂದ ಸರಕಾರ ಆ ಎಲ್ಲಾ ಕಾರ್ಮಿಕರನ್ನು ಕರೆ ತರುವ ಮೂಲಕ ಎಲ್ಲರಿಗೆ ನೆರವಾಗಬೇಕೆಂದು ವಿನಂತಿಸಿ ಮನವಿ ಸಲ್ಲಿಸಿದ್ದಾರೆ.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಶಾಸಕರ ಮನವಿಯನ್ನು ಮಾನ್ಯ ಮಾಡಿ ಮುಖ್ಯ ಕಾರ್ಯದರ್ಶಿಯವರಿಗೆ ಅಗತ್ಯ ಕ್ರಮವಹಿಸಲು ಮಾರ್ಗದರ್ಶನ ನೀಡಿದ್ದಾರೆ.