ಲಾಕ್ ಡೌನ್ ಸಡಿಲಿಕೆ ಆದೇಶ ವಾಪಸ್ ಪಡೆದ ಜಿಲ್ಲಾಡಳಿತ

0
193

ಕಲಬುರಗಿ: ದೇಶದಲ್ಲಿ ಜಾರಿಯಲಿದ್ದ ಲಾಕ್ ಡೌನ್ ನಿಯಮವನ್ನು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ ಅವರು ಸಡಿಲಿಕೆ ಗೊಳಿಸಿ ಹೊರಡಿಸಿರುವ ಆದೇಶವನ್ನು ಇಂದು ಮತ್ತೆ ವಾಪಸ್ ಪಡೆದಿದ್ದಾರೆ.

ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ದಿನೇ ದಿನೇ ಏರಿಕೆಯಾಗುತಿದೆ. ಬಟ್ಟೆ ಅಂಗಡಿ ಮತ್ತು ಹೊಟೇಲ್ ಗಳಲ್ಲಿ ಪಾರ್ಸಲ್ ಸೇರಿದಂತೆ ಈ ಕೇಳಗೆ ನೀಡಿರುವ ಸೇವೆಗಳನ್ನು ಪ್ರಾರಂಭಿಸಲಿ ಜಿಲ್ಲಾಧಿಕಾರಿ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಿದ್ದರು.

Contact Your\'s Advertisement; 9902492681

ಈ ವಾಣಿಜ್ಯ ಅಂಗಡಿ ಹಾಗೂ ಮಳಿಗೆಗಳಲ್ಲಿ ಜಿಲ್ಲೆಯಾದ್ಯಂತ ಕನಿಷ್ಠ ಸಿಬ್ಬಂದಿಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಹ್ಯಾಂಡ್‍ವಾಶ್, ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಸುವ ಷರತ್ತುಗೊಳಪಟ್ಟು ಮಳಿಗೆಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು.

ಜಿಲ್ಲೆಯಲ್ಲಿ ಸುರಕ್ಷತಾ ಅಂತರ ಕಾಪಾಡದ ಹಿನ್ನೆಲೆ ಹಾಗೂ ಕೊರೊನಾ ಪೀಡಿತರ ಸಂಖ್ಯೆ ಏರಿಕೆಯಾಗುವ ಮುನ್ಸೂಚನೆಯಿಂದಾಗಿ ಈ ಆದೇಶ ವಾಪಸ್ ಪಡೆಯಲಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಮಟ್ಟದಲ್ಲಿ ಚರ್ಚಿಸಿ ಈ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ವಾಪಸ್ ಪಡೆದ ಆದೇಶದಲ್ಲಿರುವ ಸೇವೆಗಳು

ಬಟ್ಟೆ, ಭಾಂಡೆ, ಬಂಗಾರ, ಮೊಬೈಲ್ ಅಂಗಡಿ ರಿಚಾರ್ಜ್ ಸೆಂಟರ್, ಬೇಕರಿ, ಎಲೆಕ್ಟ್ರಾನಿಕ್ಸ್ ಶಾಪ್ ಮತ್ತು ಹೋಮ್ ಅಪ್ಲಾಯನ್ಸ್, ಬುಕ್ ಸ್ಟಾಲ್, ಸ್ಟೇಷನರಿ ಅಂಗಡಿ, ಹಾರ್ಡವೇರ್, ಪೇಂಟ್ ಅಂಗಡಿ, ಅಟೋಮೋಬೈಲ್ ಅಂಗಡಿ ಹಾಗೂ ಕಂಪ್ಯೂಟರ್ (ಸಾಫ್ಟವೇರ್ ಹಾಗೂ ಹಾರ್ಡ್‍ವೇರ್) ಅಂಗಡಿಗಳನ್ನು  ತೆರೆಯಲು ಅನುಮತಿ ವಾಪಸ್ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳಿಂದ ತಿಳಿದು ಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here