ಸರ್ಕಾರಿ ಕಛೇರಿಗಳಲ್ಲಿನ ಕಾರ್ಯ ಚಟುವಟಿಕೆ ಚುರುಕುಗೊಳಿಸಲು ರೈತ ಸಂಘ ಮನವಿ

0
25

ಸುರಪುರ: ಮುಂಗಾರು ಸಮೀಪಿಸುತ್ತಿದ್ದೆ ಈಗಿನಿಂದಲೆ ರೈತರುಗಳು ತಮ್ಮ ಜಮೀನನ್ನು ಬಿತ್ತನೆಗೆ ಸಜ್ಜಯಗೊಳಿಸಿದ್ದಾರೆ ಹೀಗಾಗಿ ಅವರಿಗೆ ಸಾಲ ಸೌಲಭ್ಯಕ್ಕೆ ಬೇಕಾಗುವ ದಾಖಲಾತಿಗಳನ್ನು ಪಡೆಯಲು ಸರ್ಕಾರಿ ಕಛೇರಿಗೆ ಹೋಗಬೇಕು ಸರ್ಕಾರಿ ಕಛೆರಿಯಲ್ಲಿ ಅಧಿಕಾರಿಗಳು ಯಾವುದೆ ಕಾರಣಕ್ಕೂ ವಿಳಂಬಕ್ಕೆ ಅವಕಾಶ ನೀಡದೆ ರೈತರ ಕಾರ್ಯವನ್ನು ತ್ವರಿತಗತಿಯಲ್ಲಿ ಮುಗಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಸಾಹುಕಾರ ಒತ್ತಾಯಿಸಿದರು.

ಕರೊನಾ ಮಹಾಮಾರಿಯ ಹೊಡೆತದಿಂದ ಈಡಿ ದೇಶವೆ ತತ್ತರಿಸಿದೆ ಹಾಗೆ ಆರ್ಥಿಕ ಸ್ಥಿತಿಯು ಗಂಭಿರವಾಗಿದೆ ಮರಳಿ ನಾವುಗಳು ಆರ್ಥಿಕವಾಗಿ ಸಬಲರಾಗಲು ಆರ್ಥಿಕ ಮೂಲವಾಗಿರುವ ಕೃಷಿ ಚಟುವಟಿಕೆಗಳನ್ನು ನಡಸಬೇಕು ಈಗಾಗಲೆ  ನಗರದ ತಹಶಿಲ್ದಾರ ಕಛೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ ಕರೊನಾ ಮಹಾಮಾರಿಯ ಹೊಡೆತದಿಂದ ಈಡಿ ದೇಶವೆ ತತ್ತರಿಸಿದೆ ಹಾಗೆ ಆರ್ಥಿಕ ಸ್ಥಿತಿಯು ಗಂಭಿರವಾಗಿದೆ ಮರಳಿ ನಾವುಗಳು ಆರ್ಥಿಕವಾಗಿ ಸಬಲರಾಗಲು ಆರ್ಥಿಕ ಮೂಲವಾಗಿರುವ ಕೃಷಿ ಚಟುವಟಿಕೆಗಳನ್ನು ನಡಸಬೇಕು.

Contact Your\'s Advertisement; 9902492681

ಈಗಾಗಲೆ ನಮ್ಮ ಜಿಲ್ಲೆಯ ಅಧಿಕಾರಿಗಳು ಕರೊನಾ ಮಹಾಮಾರಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಲಾಕ್ ಡೌನ ಸಮಯದಲ್ಲಿ ಸರ್ಕಾರಿ ಕಛೇರಿಯ ಸಿಬ್ಬಂದಿಗಳು ಮನೆಯಲ್ಲಿ ಇದ್ದಾರೆ ಈಗ ಲಾಕ್ ಡೌನ ಕೊಂಚ ಮಟ್ಟಿಗೆ ಸಡಿಲವಾಗಿದೆ ಅದರಂತೆ ಸಿಬ್ಬಂದಿಗಳು ಕಛೇರಿಗೆ ಬಂದು ರೈತರ ಮುಂಗಾರು ಬಿತ್ತನೆಗೆ ಬೀಜ, ರಸಗೊಬ್ಬರ, ಕೀಟನಾಶಕ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ನಡೆಸಲು ಅಗತ್ಯಕ್ರಮಗಳನ್ನು ವಹಿಸಬೇಕು ಹಾಗೆ ರೈತರು ಸಾಲ ಪಡೆಯಲು ಬೇಕಾಗಿರುವ ಪಹಣಿ ಮತ್ತು ಇನ್ನಿತರರ ದಾಖಲಾತಿ ಪಡೆಯಲು ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆಯ ಕಛೇರಿಗಳಿಗೆ ಹೋಗುತ್ತಾರೆ ಆಯಾ ಇಲಾಖೆಯ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ ವಹಿಸದೆ ಸರಿಯಾದ ಸಮಯದಲ್ಲಿ ಅವರುಗಳ ಕೆಲಸವನ್ನು ಮಾಡಿಕೊಡಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಕೊಡಲೆ ನಿರ್ದೇಶಿಸಬೇಕು ಎಂದು ಆಗ್ರಹಿಸಿದರು.

ಕಳೆದ ತಿಂಗಳು ಸುರಿದ ಗಾಳಿ ಮಳೆಗೆ ರೈತರು ಬೆಳೆದ ಭತ್ತ ಮತ್ತು ತೋಟಗಾರಿಕೆ ಬೆಳೆಗಳು ನಾಶವಾಗಿ ರೈತರು ಕಷ್ಟದಲ್ಲಿದ್ದಾರೆ ಅತಂಹ ರೈತರಿಗೆ ಪರಿಹಾರ ಧನ ವದಗಿಸಬೇಕು ಮತ್ತು ಇನ್ನಿತರ ಬೇಡಿಕೆಗಳೂಳ್ಳ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಉಪ ತಹಶೀಲ್ದಾರ ಸುಫಿಯಾ ಸುಲ್ತಾನ ಅವರಿಗೆ ಸಲ್ಲಿಸಿದರು.

ತಾಲೂಕು ಘಟಕದ ಅಧ್ಯಕ್ಷ ಹಣಮಂತ್ರಾಯ ಮಡಿವಾಳ, ವೆಂಕಟೇಶಗೌಡ ಕುಪ್ಪಗಲ್, ರಾಘವೇಂದ್ರ ದೊರಿ, ದೇವಿಂದ್ರಪ್ಪ ಬನಗುಂಡಿ, ಮುದಕಪ್ಪ ಮಂಟೂರು, ಶರಣಬಸವ ಮೇಟಿ, ಯಲ್ಲಪ್ಪ ಗುಡ್ಡಕಾಯಿ, ಸುರೇಶ ದರಬಾರಿ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here