ಕಲಬುರಗಿ: ಕೇಂದ್ರ ಸರ್ಕಾರದ ಇಂಥ ವಿಕಟ್ ಪರಿಸ್ಥಿತಿಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಿದೆ ಮತ್ತು ವೈದ್ಯಕೀಯ ಶಿಕ್ಷಣ ಎಂ.ಡಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶುಲ್ಕ ಹೆಚ್ಚಿಸಿ ಕೇಂದ್ರ ಸರಕಾರ ಜನ ವಿರೋಧಿ ನೀತಿಯನ್ನು ಅನುಸರಿಸುತಿದೆ ಎಂದು ನಯಾ ಸವೇರಾ ಸಂಘಟನೆ ಇಂದು ರಾಷ್ಟಪತಿಗೆ ಪತ್ರ ಮನವಿ ಮಾಡಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ದರ ಹೆಚ್ಚಿಸಿ ಬಡವರ ಹೊಟ್ಟೆಗೆ ಬರೆ ಹಾಕುತ್ತಿದ್ದಾರೆ. ಪ್ರಧಾನ ಮಂತ್ರಿಗಳ ಭಾಷಣದಿಂದ ಹೊಟ್ಟೆ ತುಂಬುವುದಿಲ್ಲ. ಕೊರೋನಾ ವೈರಸ್ ನಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಪ್ರಧಾನಿ ಮೋದಿಯವರು ಮತ್ತು ಕರ್ನಾಟಕ ರಾಜ್ಯದ ಸರಕಾರದ ನಿರ್ಧಾರಗಳು ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ನಯಾ ಸವೇರ ಸಂಘಟನೆ ವತಿಯಿಂದ ನಿರಂತರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕೊರೋನಾ ರೋಗ ತಡೆಗಟ್ಟಲು ವೈದ್ಯರು ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಸ್ವಯಂ ರಕ್ಷಣಾ ಕಿಟ್ ಒದಗಿಸುವಲ್ಲಿ ವಿಫಲವಾಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಇದರ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಮತ್ತು ಆಶಾ ಕಾರ್ಯಕರ್ತರಿಗೆ ಅಂಗನವಾಡಿ ಕಾರ್ಯಕರ್ತರಿಗೆ ರಾಜ್ಯಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ನಯಾ ಸವೇರ ಸಂಘಟನೆ ಮನವಿಯಲ್ಲಿ ಒತ್ತಾಯಿಸಿದೆ.
ಸಂಘಟನೆಯ ಅಧ್ಯಕ್ಷರಾದ ಮೋದಿನ ಪಟೇಲ್ ಅಣಬಿ, ಸಲೀಂ ಅಹ್ಮದ್ ಚಿತಾಪುರಿ, ಪ್ರಧಾನ ಕಾರ್ಯದರ್ಶಿ wpi. ಹೈದರಲಿ ಇನಾಮದಾರ್, ಸೈರಾ ಬಾನು, ಅಬ್ದುಲ್ ವಾಹಿದ್ ಇದ್ದರು.