ಕಂಬಳಿ ನೇಕಾರರಿಗೆ ಪ್ಯಾಕೇಜ್ ಘೋಷಿಸಿ: ಕುಮಾರ ಅರಕೇರಿ

1
178

ಮುಧೋಳ : ಸಂಕಷ್ಟದಲ್ಲಿರುವ ಕಂಬಳಿ ನೇಕಾರರಿಗೆ ಹತ್ತು ಸಾವಿರ ರೂ.ಗಳ ಪ್ಯಾಕೇಜ್ ಘೋಷಿಸಿ ಎಂದು ಹಾಲುಮತ ಮಹಾಸಭಾದ ಸಂಚಾಲಕರಾದ ಕುಮಾರ ಅರಕೇರಿ ಮುಖ್ಯ ಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ಕೊರೊನಾ ಹರಡದಂತೆ ಇಡೀ ರಾಷ್ಟ್ರದಲ್ಲಿ ಲಾಕ್ ಡೌನ್ ಮಾಡಿರುವ ಹಿನ್ನೆಲೆ ಕಳೆದ 40 ಕ್ಕೂ ಹೆಚ್ಚು ದಿನಗಳಿಂದ ಕಂಬಳಿ ನೇಕಾರರು , ಉದ್ಯಮದವರು ಮಾರಾಟಕ್ಕೆ ಅವಕಾಶ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಖ್ಯಮಂತ್ರಿಗಳು ಕಂಬಳಿ ನೇಕಾರರ ನೆರವಿಗೆ ಧಾವಿಸಬೇಕು.

Contact Your\'s Advertisement; 9902492681

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಟ್ಟೆ, ರೇಷ್ಮೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಆದರೆ ಲಕ್ಷಾಂತರ ಕಂಬಳಿ ನೇಕಾರರು ಇದ್ದರು ಇವರನ್ನು ಕಡೆಕಣಿಸಿದ್ದಾರೆ. ತೀವ್ರ ಸಂಕಷ್ಟ ಎದುರಿಸುತ್ತಿರುವ ಕಂಬಳಿ ನೇಕಾರರ ಸಾಲ ಮನ್ನಾ ಮಾಡಿ, ಶೂನ್ಯ ಬಡ್ಡಿ ದರದಲ್ಲಿ ಒಂದು ಲಕ್ಷ ರೂ ವರೆಗೆ ಸಾಲ ಸೌಲಭ್ಯವನ್ನು ನೀಡಬೇಕೆಂದು ಅವರು ಮಾಡುತ್ತಿದ್ದಾರೆ.

ಇತರೆ ನೇಕಾರರಿಗೆ ನೀಡಿದ ಪ್ರಾಮುಖ್ಯತೆಯನ್ನು ಕಂಬಳಿ ನೇಕಾರರಿಗೂ ನೀಡುವಂತೆ ರಾಜ್ಯದ ಕಂಬಳಿ ನೇಕಾರರ ಪರವಾಗಿ ಅವರು ಮನವಿ ಮಾಡಿದ್ದಾರೆ.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here