ನೂತನ ಕ್ವಾರಂಟೈನ್ ಸೆಂಟರ್ ತೆರೆಯಲು ಪಾಲಿಟೆಕ್ನಿಕ್ ಕಾಲೇಜಿಗೆ ಟಾಸ್ಕ್ ಫೋರ್ಸ್ ತಂಡ ಭೇಟಿ

0
42

ಸುರಪುರ: ಹುಣಸಗಿ ಮತ್ತು ಸುರಪುರ ತಾಲೂಕಿನ ಜನರು ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಮರಳಿ ಬರುತ್ತಿರುವ ಹಿನ್ನಲೆಯಲ್ಲಿ ಅವರನ್ನು ಸರ್ಕಾರದ ಆದೇಶದ ಪ್ರಕಾರ ಅವರ ಆರೋಗ್ಯ ತಪಾಸಣೆ ಮಾಡಿ ಅವರನ್ನು ಕ್ವಾರಂಟೈನ್ ಮಾಡಲು ಸುಸಜ್ಜಿತ ಕಟ್ಟಡ ಮತ್ತು ನಗರದ ಹೊರವಲಯದಲ್ಲಿರುವ ಪಾಲಿಟೆಕ್ನಿಕ್ ಕಾಲೇಜನ್ನು ಕ್ವಾರಂಟೈನ ವಾರ್ಡ ಮಾಡಲು ನಿರ್ಧರಿಸಲಾಗಿದೆ ಎಂದು ತಹಶಿಲ್ದಾರ ನಿಂಗಣ್ಣ ಬಿರಾದರ ತಿಳಿಸಿದರು.

ನಗರದ ಪಾಲಿಟೆಕ್ನಿಕ್ ಕಾಲೇಜಿಗೆ ಬೇಟಿ ನೀಡಿ ಮಾತನಾಡಿದ ಅವರು ಈಗಾಗಲೆ ಕರೊನಾ ಮಹಾಮಾರಿಯು ನಮ್ಮ ತಾಲೂಕಿಗೆ ಬರದಂತೆ ಎಲ್ಲಾ ಮುಂಜಾಗೃತಾ ಕ್ರಮವನ್ನು ವಹಿಸಲಾಗಿದೆ ಅದರಂತೆ ಸಾರ್ವಜನಿಕರು ಕೂಡಾ ಈ ವೈರಸ್ ತಗಲದಂತೆ ಸಾಕಷ್ಟು ಎಚ್ಚರ ವಹಿಸಿದ್ದಾರೆ.

Contact Your\'s Advertisement; 9902492681

ಇಲ್ಲಿಯವರೆಗೂ ಯಾವುದೆ ಪ್ರಕರಣಗಳು ನಮ್ಮ ತಾಲೂಕಿನಲ್ಲಿ ಕಂಡುಬಂದಿಲ್ಲಾ ಮತ್ತು ಇನ್ನು ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರ ಮತ್ತು ಗೋವಾದಕ್ಕೆ ದುಡಿಮೆಗಾಘಿ ಹೋಗಿರುವ ಜನರನ್ನು ಮರಳಿ ಕರೆತರುತ್ತಿರುವ ಹಿನ್ನಲೆಯಲ್ಲಿ ಖಾಸಗಿ ಶಾಲೆ ಮತ್ತು ಕಾಲೇಜು ಮತ್ತು ವಸತಿನಿಲಯಗಳನ್ನು ಕ್ವಾರಂಟೈನ್ ಸೆಂಟರ್ ಮಾಡಲು ಸಿದ್ದತೆ ನಡೆಸಲಾಗಿತ್ತು ಆದರೆ ಕೆಲವು ವಸತಿನಿಲಯಗಳು ಜನಸಂದಣಿ ಪ್ರದೇಶದಲಿರುವುದರಿಂದ ಅವುಗಳನ್ನು ಕೈಬಿಟ್ಟು ಹೊರವಲಯದಲ್ಲಿರುವ ಪಾಲಿಟೆಕ್ನಿಕ್ ಕಾಲೇಜನ್ನು ಆಯ್ಕೆ ಮಾಡಿಕೊಂಡು ಕ್ವಾರಂಟೈನ್ ಸೆಂಟರ್ ಮಾಡಲಾಗುತ್ತಿದೆ ಎಂದರು.

ಕಾಲೇಜಿನಲ್ಲಿ ಸಾಕಷ್ಟು ಕೋಣೆಗಳು ಮತ್ತು ಶೌಚಾಲಯದ ವ್ಯವಸ್ಥೆ ಮತ್ತು ನೀರಿನ ವ್ಯವಸ್ಥೆ ಇದೆ ಒಂದು ಕೋಣೆಯಲ್ಲಿ 5 ರಿಂದ 8 ಜನರನ್ನು ಕ್ವಾರಂಟೈನ್ ಮಾಡಬಹುದು ಸುಮಾರು ಈ ಸೆಂಟರ್ ನಲ್ಲಿ 200 ರಿಂದ 300 ಜನರನ್ನು ಕ್ವಾರಂಟೈನ್ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ಉಪತಹಶಿಲ್ದಾರ ಸುಫಿಯಾ ಸುಲ್ತಾನ, ತಾಪಂ ಇಒ ಅಂಬ್ರೇಶ್, ವೈದ್ಯಾಧಿಕಾರಿ ಡಾ.ಆರ್.ವಿ.ನಾಯಕ, ಪಿಐ ಎಸ್.ಎಮ್.ಪಾಟೀಲ್, ಪೌರಾಯುಕ್ತ ಜೀವನ ಕುಮಾರ, ಸಿಬ್ಬಂದಿಗಳಾದ ಓಂಕಾರ ಪೊಜಾರಿ, ಲಕ್ಷ್ಮಣ, ಶಿವಪುತ್ರಪ್ಪ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here