ಬಿಸಿ ಬಿಸಿ ಸುದ್ದಿಕಲೆ-ಕ್ರೀಡೆಸಾಹಿತ್ಯಹೈದರಾಬಾದ್ ಕರ್ನಾಟಕ ದೂರದಿಂದ ನೀರ ತರಬೇಕ: ಇ-ಮೀಡಿಯಾ ಕವಿತೆ ಮೂಲಕ emedialine - May 12, 2020 0 87 Facebook Twitter Pinterest WhatsApp ದೂರದಿಂದ ನೀರ ತರಬೇಕ ಬ್ಯಾಸಿಗೆ ಬಂತವ್ವ ಕೂಸಿಗೆ ನೀರಿಲ್ಲ ಕಾಸಿಗೆ ಅಲ್ಲಿ ಮಾರುತಾರ//ಅಣ್ಣಯ್ಯ ಮನಿಯಾಗ ಇಲ್ಲ ತರಲಾಕ ಉಳ್ಳವರ ಮನಿಯಾಗ ಸೋಸಿದ ನೀರವ್ವ ಕಾಸಿಗೆ ಕೊಂಡು ತರುತಾರ//ಮಗಳೆ ಉಳ್ಳವರು ಕೊಂಡು ಕುಡಿತಾರ ಸಿಹಿ ನೀರ ಹಳ್ಳದ ವರಿತೆಲ್ಲ ಬತ್ತ್ಯಾವು ಹಳ್ಳ ಕೊಳ್ಳಗಳೇಲ್ಲ ಒಣಗ್ಯಾವು//ಮಗಳೇ ಹಳ್ಳಕೆ ನೀನು ಹೋಗಬ್ಯಾಡ ಊರಾಚೆ ಹೊಲದಾಗ ತಿಳಿ ನೀರ ಕೆರೆಯವ್ವ ಊರ ಗೌಡರು ನಿಂತು ಕಟ್ಟಿಸ್ಯಾರ//ಮಗಳೇ ಅಲ್ಲಿ ಹೋಗಿ ನೀರ ತಾರವ್ವ ಊರಾಚೆಯ ಕೆರಿ ಬಲು ದೂರ ತಂಗೆವ್ವಾ ಒಬ್ಬಾಕಿ ನೀನು ಹೊಗಬ್ಯಾಡ//ತಂಗೆಮ್ಮ ಎದರು ಮನೆ ಗೆಳತಿಯ ಜೊತೆಹೋಗು ಒಲವಿನ ಸಖಿ ಬಾರೆ ಹೋಗೋಣ ನೀರಿಗೆ ದೂರದಿಂದಲಿ ನೀರ ತರಬೇಕ// ಸಖಿಯೇ ಸಾವಕಾಶ ಮಾಡದೆ ಬಾ ಬೇಗ ನೀರಿಗೆ ನಾ ಬರುವೆ ತಾಳು ನನ್ನ ಸಖಿಯೇ ಮಣ್ಣಿನ ಬಿಂದಿಗೆ ನಾ ತರುವೆ// ಗೆಳತಿ ತಣ್ಣಗಿರುತಾವು ಕೆರಿ ನೀರ….. -ಬಸವರಾಜ್ ಚೌಡ್ಕಿ