ಕಲಬುರಗಿಗೆ ಬಂದಿಳಿದ ಕಾರ್ಮಿಕರಿಗೆ ಯುವ ಕಾಂಗ್ರೇಸ್ ಅಧ್ಯಕ್ಷ ಝಳಕಿ ಆರೋಗ್ಯ ಕ್ಷೇಮ ವಿಚಾರಣೆ

0
66

ಕಲಬುರಗಿ: ಮಹಾರಾಷ್ಟ್ರ ದಿಂದ ವಿಶೇಷ ರೇಲ್ವೆ ಮೂಲಕ ಕಲಬುರಗಿಗೆ ಬಂದಿಳಿದ ಕಾರ್ಮಿಕರಿಗೆ ಯುವ ಕಾಂಗ್ರೇಸ್ ಅಧ್ಯಕ್ಷ ಈರಣ್ಣ ಝಳಕಿ ಆರೋಗ್ಯ ಕ್ಷೇಮ ವಿಚಾರಿಸಿದರು.

ಶಾಸಕ ಪ್ರಿಯಾಂಕ್ ಖರ್ಗೆ ಅವರ ನಿರಂತರ ಒತ್ತಡದಿಂದಾಗಿ ರಾಜ್ಯ ಸರಕಾರ ಮಹಾರಾಷ್ಟ್ರ ದಲ್ಲಿ ಸಿಲುಕಿದ್ದ ಕೂಲಿ ಕಾರ್ಮಿಕರನ್ನು ವಿಶೇಷ ರೇಲ್ವೆ ಮೂಲಕ ಇಂದು ಬೆಳಗಿನ ಜಾವ 2 ಗಂಟೆಗೆ ಕಲಬುರಗಿಗೆ ಬಂದಿಳಿದರು ಎಂದು ಝಳಕಿ ಹೇಳಿದ್ದಾರೆ.

Contact Your\'s Advertisement; 9902492681

ರಾಜ್ಯ ಸರಕಾರ ವಲಸೆ ಕಾರ್ಮಿಕರ ಬಗ್ಗೆ ತನ್ನ ನಿಷ್ಕಾಳಜಿ ಮುಂದುವರೆಸಿ ಅವರನ್ನು ವಾಪಸ್ ಜಿಲ್ಲೆಗೆ ಕರೆತರಲು ವಿಳಂಬ ನೀತಿ ಅನುಸರಿಸಿತ್ತು. ಆದರೆ, ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ವಲಸೆ ಕಾರ್ಮಿಕರ ಸಂಕಷ್ಟಗಳನ್ನು ರಾಜ್ಯ ಸರಕಾರಕ್ಕೆ ಪತ್ರ ಬರೆಯುವ ಮೂಲಕ ಮನವರಿಕೆ ಮಾಡಿಕೊಟ್ಟಿದ್ದರು.

ಜೊತೆಗೆ ಕಾರ್ಮಿಕರನ್ನು ಕರೆತರಲು ತಗುಲುವ ರೈಲ್ವೆ ದರದ ವೆಚ್ಚವನ್ನೂ ಕೂಡಾ ಕೆಪಿಸಿಸಿ ವತಿಯಿಂದಲೇ ಭರಿಸುವುದಾಗಿ ಸಿಎಂ ಅವರಿಗೆ ತಿಳಿಸಿ ಕೂಡಲೇ ಕಾರ್ಮಿಕರನ್ನು ಜಿಲ್ಲೆಗೆ ಕರೆತರುವಂತೆ ಅಗ್ರಹಿಸಿದ್ದರು. ಪರಿಣಾಮವಾಗಿ ಇಂದು ಸುಮಾರು 1200 ಕಾರ್ಮಿಕರು ವಿಶೇಷ ರೈಲ್ವೆ ಮೂಲಕ ಕಲಬುರಗಿಗೆ ಬಂದಿದ್ದಾರೆ.

ಈಗ ಬಂದಿರುವ ಕಾರ್ಮಿಕರ ಆರೋಗ್ಯ ತಪಾಸಣೆ ಮತ್ತು ಕ್ವಾರೆಂಟನನಲ್ಲಿ ಅವರನ್ನು ಇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಝಳಕಿ ಅವರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here