ಸೇಡಂ : ದೇಶಾದ್ಯಂತ ಕಿಲ್ಲರ್ ಕರೋನಾ ವೈರಸ್ ಅತಂಕ ಮೂಡಿಸಿದ್ದು ಜಿಲ್ಲೆಯಲ್ಲಿ ದಿನ ದಿನ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಮನೆ ಮನೆಗೆ ತರಳಿ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಊಡಗಿ ಅವರು ಆರೋಗ್ಯ ವಿಚಾರಿಸಿ ಕರೋನಾ ಮಹಾಮರಿ ಕುರಿತು ಜನ ಜಾಗೃತಿ ಮೂಡಿಸಿದರು.
ನಂತರ ತಾಲ್ಲೂಕಿನ ಆಡಕಿ ಜಿ.ಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕುರುಕುಂಟ, ಮದಕಲ್ ಗ್ರಾಮದ ಜನರ ಕಂದು ಕೊರತೆಯನ್ನು ಆಲಿಸಿ ಮತ್ತು ನೀರಿನ ಸಮಸ್ಯೆ ಕುರಿತು ಗ್ರಾಮ ಪಂಚಾಯತ ಅಧಿಕಾರಯೊಂದಿಗೆ ಮಾತನಾಡಿ ನೀರಿನ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು ಮತ್ತು ಉದ್ಯೋಗ ಖಾತ್ರಿಯಡಿ ಪ್ರತಿಯೊಬ್ಬರಿಗೂ ಉದ್ಯೋಗ ದೊರೆಯುವಂತೆ ಆಗಬೇಕು ಎಂದರು. .
ಉದ್ಯೋಗ ಖಾತ್ರಿ ಯಡಿಯಲ್ಲಿ ಕೆಲಸ ಮಾಡುತ್ತಿರವ ಗ್ರಾಮಸ್ಥರನ್ನು ಭೇಟಿಯಾಗಿ, ಅವರ ಸಮಸ್ಯೆ ಆಲಿಸಿದರು. ಪ್ರತಿಯೊಬ್ಬರಿಗೂ ಮಾಸ್ಕ್ ನೀಡುವ ವ್ಯವಸ್ಥೆ ಮಾಡಲಾಗಿದ್ದು, ನಿಮಗೆ ಯಾವುದೇ ಸಮಸ್ಯೆ ಇದ್ದಲ್ಲಿ ನನಗೆ ನೇರ ಸಂಪರ್ಕಿಸಿ ನಾನು ನಿಮ್ಮ ಸಹಾಯಕ್ಕೆ ಸದಾ ಸಿದ್ದ ಎಂದು ಹೇಳಿದರು.
ಈ ಸಮಯದಲ್ಲಿ ಬ್ಲಾಕ ಕಾಂಗ್ರೇಸ್ ಕಮೀಟಿ ತಾಲೂಕಧ್ಯಕ್ಷರಾದ ನಾಗೇಶ್ವರಾವ ಮಾಲಿಪಾಟೀಲ, ವೆಂಕಟರಾಮರೆಡ್ಡಿ, ಅಣವೀರಪ್ಪ ದೇಸಾಯಿ,ಸುದರ್ಶನ ರೆಡ್ಡಿ,ನಾಗರೆಡ್ಡಿ, ಪ್ರತಾಪ ರೆಡ್ಡಿ,ರಾಮಯ್ಯ ಪೂಜಾರಿ,ಶರಣ ಗೌಡ ಪಾಟೀಲ, ಗುರುನಾಥ ರೆಡ್ಡಿ, ಶಿವರೆಡ್ಡಿ, ನರಸರೆಡ್ಡಿ, ಶಂಭುಲಿಂಗ ನಾಟೀಕರ, ಅಬ್ದುಲ ಸತ್ತರ ನಾಡೇಪಲ್ಲಿ,ಮುರಳಿ ಮನೋವರರೆಡ್ಡಿ,ವೆಂಕಟಪ್ಪ ಮ್ಯಾಕಲ ಸೊಮಪಲ್ಲಿ,ವಿಲಾಸ ಗೌತಂ ನಿಡಗುಂದಾ,ಪ್ರಶಾಂತ ಸೇಡಮಕರ,ಬಸವರಾಜ ಸಂಗನ ಮತಿತ್ತರು ಇದರು.