ರಸ್ತೆ ಅಪಘಾತ: ಕಾರ್ಯನಿರತ ನರ್ಸ್ ಗೆ ಗಂಭೀರ ಗಾಯ

0
828

ಕಲಬುರಗಿ: ಕೈನೆಟಿಕ್ ಹೊಂಡಾ ದ್ವಿ ಚಕ್ರ ವಾಹನ ಆಯ ತಪ್ಪಿದ್ದರಿಂದ ಕರ್ತವ್ಯಕ್ಕೆ ಹೊರಟಿದ್ದ ಇಬ್ಬರು ಮಹಿಳೆಯರು (ನರ್ಸ್) ತೀವ್ರ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.

ಶಹಾಬಾದ್ ಪಟ್ಟಣದ ರಾವೂರ ಕ್ರಾಸ್ ಬಳಿ ಈ ಘಟನೆ ಸಂಭವಿಸಿದ್ದು, ರೇಣುಕ ಮತ್ತು ರಾಜಕುಮಾರಿ ಎಂಬುವರು ಕಲಬುರಗಿಯಿಂದ ಚಿತ್ತಾಪುರಕ್ಕೆ ಹೊರಟಿರುವಾಗ ಈ ಘಟನೆ ನಡೆದಿದೆ. ಹಿಂಬದಿ ಕುಳಿತಿದ್ದ ನರ್ಸ್ ಗೆ ತೀವ್ರ ರಕ್ತಸ್ರಾವ ಆಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Contact Your\'s Advertisement; 9902492681

ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಲಬುರಗಿಯ ಸ್ಥಳೀಯ ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here