ಸುರಪುರ: ನಗರದ ಆಸರ ಮೊಹಲ್ಲಾದ ಕುಟುಂಬ ಒಂದರ ದಂಪತಿಗಳಲ್ಲಿ ಕೊರೊನಾ ಸೊಂಕು ಕಾಣಿಸಿದ್ದರಿಂದ ಇಡೀ ಆಸರ ಮೊಹಲ್ಲಾವನ್ನು ಜಿಲ್ಲಾ ಮತ್ತು ತಾಲೂಕಾಡಳಿತ ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಿ ಏರಿಯಾದ ಯಾವುದೆ ಜನ ಮನೆಯಿಂದ ಹೊರಗೆ ಬರದಂತೆ ಆದೇಶ ಹೊರಡಿಸಿದೆ.
ಆದರೆ ಆಸರ ಮೊಹಲ್ಲಾದ ಬಹುತೇಕ ಎಲ್ಲಾ ಕುಟುಂಬಗಳು ಆಶ್ರಯಿಸಿರುವುದು ದೈನಂದಿನ ದುಡಿಮೆಯನ್ನು.ಇಲ್ಲಿಯ ಅನೇಕ ಕುಟುಂಬಗಳ ಮೂಲ ವೃತ್ತ ಸಾಂಪ್ರದಾಯಿಕವಾಗಿ ಬಂದಿರುವ ಬೇಡಿಕೊಂಡು ತಂದು ತಿನ್ನುವುದು.ಆದರೆ ಈಗ ಈ ವೃತ್ತಿಯನ್ನು ಬಿಟ್ಟು ಗ್ರಾಮೀಣಗಳಿಗೆ ಹೋಗಿ ಹಳೆ ಸಾಮಾನು ಸಂಗ್ರಹಿಸಿ ತಂದು ಮಾರುವುದು,ಅಲ್ಲದೆ ಐಸ್ ಕ್ರಿಂ ಮಾರುವ ಉದ್ಯೋಗವನ್ನು ಮಾಡಿ ದಿನ ದುಡಿದು ಬಂದ ಹಣದಲ್ಲಿ ಜೀವನ ನಡೆಸುತ್ತಿವೆ.ಇಂತಹ ಕಷ್ಟದ ಬದುಕಿನ ಕುಟುಂಬಗಳಿಗೆ ಸರಕಾರ ಲಾಕ್‌ಡೌನ್ ಘೋಷಣೆ ಮಾಡಿದಾಗಿನಿಂದ ಕೆಲಸವಿಲ್ಲದೆ ಮನೆಯಲ್ಲಿ ಕುಳಿತು ನಿತ್ಯದ ಬದುಕಿಗೆ ಸಂಕಷ್ಟ ಪಡುತ್ತಿದ್ದಾರೆ.
ಈಗ ಆಸರ ಮೊಹಲ್ಲಾದ ಕುಟುಂಬದ ಇಬ್ಬರಲ್ಲಿ ಕೊರೊನಾ ಸೊಂಕು ಕಂಡಿದ್ದರಿಂದ ಸಂಪೂರ್ಣ ಏರಿಯಾವನ್ನೆ ಕಂಟೋನ್ಮೆಂಟ್ ಎಂದು ಘೋಷಿಸಿದ್ದರಿಂದ ಜನರು ಮನೆಯಿಂದ ಹೊರಗೆ ಬರದಂತೆ ನಿರ್ಬಂಧ ಹೊರಡಿಸಲಾಗಿದೆ. ಇದರಿಂದ ಇಲ್ಲಿಯ ಕುಟುಂಬಗಳು ದುಡಿಮೆಯೂ ಇಲ್ಲ,ಇತ್ತ ದಿನದ ಬದುಕಿಗೆ ಬೇಕಾಗುವ ಆಹಾರ ಸಾಮಾಗ್ರಿ ಮತ್ತು ಅಗತ್ಯ ವಸ್ತುಗಳಿಗೂ ಪರದಾಡುವಂತಾಗಿದೆ. ಆದ್ದರಿಂದ ಸರಕಾರ ಕೂಡಲೆ ಈ ಆಸರ ಮೊಹಲ್ಲಾದ ಎಲ್ಲಾ ಕುಟುಂಬಗಳಿಗೆ ಮೂರು ತಿಂಗಳಿಗಾಗುವಷ್ಟು ಆಹಾರ ಧಾನ್ಯಗಳ ವಿತರಿಸಬೇಕು ಮತ್ತು ಪ್ರತಿ ಕುಟುಂಬಕ್ಕೆ ಕನಿಷ್ಟ ೧೦ ಸಾವಿರ ಪರಿಹಾರ ಧನ ನಿಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಒತ್ತಾಯಿಸುವುದಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕಾರ ಹಾಗು ಮುಖಂಡ ರಫೀಕ ಸುರಪುರ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.