ಶಹಾಬಾದ: ನಗರದಲ್ಲಿ ವಿವಿಧ ರಾಜ್ಯದಿಂದ ವಲಸೆ ಬಂದ ಕಾರ್ಮಿಕರಿಗೆ ಕೊರಂಟೈನ್ ಮಾಡಲಾದ ಶಾಸಕರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜಿಇ ಕಾಲೋನಿಯ ಎಂಸಿಸಿ ಶಾಲೆಗೆ ಶಾಸಕ ಬಸವರಾಜ ಮತ್ತಿಮಡು ಭೇಟಿ ನೀಡಿ ವಲಸೆ ಕಾರ್ಮಿಕರ ಆರೋಗ್ಯ ವಿಚಾರಿಸಿದರು.
ನಗರದ ವ್ಯಾಪ್ತಿಯ ಎರಡು ಕೊರಂಟೈನ್ ಕೇಂದ್ರಗಳಿಗೆ ಬೇಟಿ ನೀಡಿದ ಶಾಸಕ ಬಸವರಾಜ ಮತ್ತಿಮಡು, ಕೊರಂಟೈನ್ ಕೇಂದ್ರದಲ್ಲಿ ಆಹಾರ, ತಿಂಡಿ, ನೀರು ಸರಿಯಾದ ಸಮಯಕ್ಕೆ ಸಿಗುತ್ತಿದೆಯೇ ಎಂದು ವಿಚಾರಿಸಿ, ಆಹಾರ ಪೂರೈಕೆಯಲ್ಲಿ ಅಲ್ಪಸ್ವಲ್ಪ ವಿಳಂಬವಾದಲ್ಲಿ ತಾಲೂಕಾಡಳಿತಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು. ಸರ್ಕಾರ ನಿಮ್ಮ ಹಾಗೂ ಜನರ ಆರೋಗ್ಯ ದೃಷ್ಠಿಯಿಂದ ನಿಮಗೆಲ್ಲಾ ಕೊರಂಟೈನ್ ಮಾಡಲಾಗಿದ್ದು, ಸರ್ಕಾರದ ನಿಯಮಗಳಿಗೆ ಚಾಚು ತಪ್ಪದೇ ಅನುಸರಿಸಿ ಎಂದು ಹೇಳಿದರು.
ತಹಶೀಲ್ದಾರ ಸುರೇಶ ವರ್ಮಾ ಮಾತನಾಡಿ ಗರ್ಭೀಣಿ, ವಯೋವೃದ್ಧ ಹಾಗೂ ಮಕ್ಕಳಿಗೆ ಶೌಚಾಲಯ ಒಳಗೊಂಡ ಕೋಣೆಯನ್ನು ಹೊಂದರಿವ ಕೋಣೆ ಅಥವಾ ಕಟ್ಟಡವನ್ನು ತೋರಿಸಿದರೇ, ಆ ಕಟ್ಟಡವನ್ನು ಅಧಿಕಾರಿಗಳು ಪರಿಶೀಲಿಸಿ ಅವರನ್ನು ಪ್ರತ್ಯೇಕವಾಗಿ ಹೋಮ್ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುವದು ಎಂದು ತಿಳಿಸಿದರು.
ಪೌರಾಯುಕ್ತ ವೆಂಕಟೇಶ, ಪಿಐ ಬಿ.ಅಮರೇಶ, ನೈರ್ಮಲ್ಯ ನಿರೀಕ್ಷಕ ಶಿವುಕುಮಾರ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಸುಭಾಷ ಜಾಪೂರ, ನಾಗರಾಜ ಮೇಲಗಿರಿ ಸೇರಿದಂತೆ ಇತರರು ಇದ್ದರು.