ಸೇಡಂ : ದೇಶದಲ್ಲಿ ಕೊರೋನಾ ವ್ಯಾಪಕವಾಗಿ ಹರಡಿತ್ತಿದೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದು, ಸಾವಿರಾರು ಬಡ ಜನರನ್ನು ಸಂಕಷ್ಟಕ್ಕೆ ಸಿಲುಕಿದ್ದಾರೆ, ಪವಿತ್ರ ರಂಜಾನ್ ನಿಮಿತ್ತ ಸಂಕಷ್ಟಕ್ಕೆ ಸಿಲುಕಿದ ಬಡಜನರಿಗೆ ಸಹಾಯ ಮಾಡಬೇಕಾಗಿದೆ. ಆದರಿಂದ ಈದ್ ಹಬ್ಬಕ್ಕೆ ಹೋಸ ಬಟ್ಟೆಗಳು ಮುಸ್ಲಿಂ ಬಾಂಧವರು ಖರೀದಿ ಮಾಡಬಾರದು ಎಂದು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ತಾಲ್ಲೂಕು ಅಧ್ಯಕ್ಷ ಸಾಜಿದ್ ಖಾನ್ ಮನವಿ ಮಾಡಿದ್ದಾರೆ.
ಅವರು ಪಟ್ಟಣದಲ್ಲಿ ಮಾತನಾಡಿ, ದೇಶಕ್ಕಾಗಿ, ರಂಜಾನ್ ಹಬ್ಬವನ್ನು ತ್ಯಾಗ ಮಾಡಿ, ಈ ಬಾರಿ ಅಲ್ಲಾಹನಿಗೆ ರಾಜಿ ಮಾಡುವ ನಿಟ್ಟಿನಲ್ಲಿ ಕಳಯಬೇಕು ಹೊರತು, ಮಾರುಕಟ್ಟೆಯಲ್ಲಿ ಜಂಟಿಯಾಗಿ ತಿರುಗುತ್ತ ಹೊಸ ಬಟ್ಟೆ ಗಾಗಿ ಲಾಕ್ ಡೌನ್ ಉಲ್ಲಂಘನೆ ಮಾಡಬೇಡಿ ಎಂದು ಕರೆ ನೀಡಿದರು.
ಇಡೀ ದೇಶವೇ ಅಪಾಯ ಮತ್ತು ದುಃಖದಲ್ಲಿದೆ. ಬಡವರು ಮತ್ತು ನಿರ್ಗತಿಕರಿಗೆ ಝಕಾತ್, ಫಿತ್ರಾ ನೀಡಿ ನೆರವು ಆಗಿ ಮತ್ತು ಸರ್ಕಾರ ಅದೇಶದಂತೆ ಸರಳ ಹಬ್ಬ ಆಚರಿಸೋಣ ಎಂದು ಇ ಮೀಡಿಯಾ ಮೂಲಕ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯನಿರತ ಅಧ್ಯಕ್ಷ ಅಜೀಜ್ ಖಾನ್ ,ಪ್ರಧಾನ ಕಾರ್ಯದರ್ಶಿ ಜಾವೀದ್ ನಿರ್ನವಿ, ಉಪಾಧ್ಯಕ್ಷ ಅಲೀಮ್ ಪಾಷಾ ,ಉಪಾಧ್ಯಕ್ಷ ಮೌಲಾನಾ ಯಾಸೆನ್ ಖಾನ್ , ಮಕ್ಬೂಲ್ ಅಹ್ಮದ್ ಮತ್ತು ಜಹೀರ್ ಅಹ್ಮದ್ ಇದ್ದರು.