ಸುರಪುರ: ದೇವತ್ಕಲ್ ಗ್ರಾಮ ಲೆಕ್ಕಿಗ ಪ್ರತಾಪ ಮೇಲೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದನ್ನು ವಿಳಂಭ ಮಾಡುತ್ತಿರುವುದರಿಂದ ನೊಂದ ಗ್ರಾಮ ಲೆಕ್ಕಿಗರು ನಮ್ಮ ಸಂಘದ ರಾಜ್ಯ ಸಮಿತಿ ನಿರ್ಧಾರದಂತೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗುವ ನಿರ್ಧಾರ ಮಾಡಲಾಗಿತ್ತು,ಆದರೆ ಮಾನ್ಯ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಯಾದಗಿರಿ ಅಪರ ಜಿಲ್ಲಾಧಿಕಾರಿಗಳು ತಿಳಿಸಿದಂತೆ ಗ್ರಾಮ ಲೆಕ್ಕಿಗರ ಮೇಲಿನ ಪೊಲೀಸರ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು,ಸದ್ಯ ಕೋವಿಡ್-19 ನಿರ್ಮೂಲನೆಯ ವಿಷಯ ಪ್ರಮುಖವಾಗಿರುವುದರಿಂದ ಈ ಕೋವಿಡ್-19 ಕೆಲಸ ಮುಗಿಯುವವರೆಗೆ ಸಹನೆ ಕಾಯ್ದುಕೊಳ್ಳುವಂತೆ ಸೂಚಿಸಿದ್ದರಿಂದ, ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಅಪರ ಜಿಲ್ಲಾಧಿಕಾರಿಗಳ ಸೂಚನೆಯಂತೆ ಎಲ್ಲಾ ಗ್ರಾಮ ಲೆಕ್ಕಿಗರು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗುವುದನ್ನು ಕೈಬಿಟ್ಟು,ಕೆಲಸಕ್ಕೆ ಎಲ್ಲರು ಹಾಜರಾಗಿದ್ದೇವೆ.
ಆದರೆ ಹಿಂದಿನಿಂದಲೂ ಗ್ರಾಮ ಲೆಕ್ಕಿಗರ ಮೇಲೆ ಪೊಲೀಸರ ಹಲ್ಲೆಗಳಾದಾಗ ಯಾವುದೇ ಕ್ರಮವಾಗದ ಹಿನ್ನೆಲೆಯಲ್ಲಿ ಎಲ್ಲಾ ಗ್ರಾಮ ಲೆಕ್ಕಿಗರು ತುಂಬಾ ನೊಂದಿದ್ದೇವೆ.ಅದು ಈಗ ಪ್ರತಾಪರ ಮೇಲೆ ಮತ್ತೆ ಹಲ್ಲೆಯಾಗುವ ಮೂಲಕ ಸಾಬೀತಾಗಿದೆ.ಆದ್ದರಿಂದ ನಮ್ಮ ಮನವಿಯನ್ನು ಕಡೆಗಣಿಸದೆ ಒಂದು ವಾರದೊಳಗೆ ಮಾನ್ಯ ಜಿಲ್ಲಾಧಿಕಾರಿಗಳು ಹಲ್ಲೆ ಮಾಡಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುವುದಾಗಿ ತಾಲೂಕು ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷ ಪ್ರದೀಪ್ ನಾಲ್ವಡೆ ಜಿಲ್ಲಾಧಿಕಾರಿಗಳಲ್ಲಿ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.