ಸುರಪುರ: ಕಳೆದ ಒಂದುವರೆ ತಿಂಗಳಿಂದ ಎಲ್ಲೆಡೆ ಕೊರೊನಾ ವೈರಸ್ ಹಾವಳಿಯಿಂದ ಎಲ್ಲಾ ವ್ಯಾಪಾರ ವಹಿವಾಟು, ಅಂಗಡಿ ಮುಂಗಟ್ಟುಗಳು ಮುಚ್ಚಿ ವಾಣಿಜ್ಯ ವ್ಯಾಪಾರ ನಿಂತುಹೋಗಿತ್ತು.
ಅಲ್ಲದೆ ಮುಖ್ಯವಾಗಿ ಲಾಕ್‍ಡೌನ್ ಘೋಷಣೆಯಾದಾಗಿನಿಂದ ಎನ್‍ಈಕೆಆರ್‍ಟಿಸಿ ತನ್ನ ಸಾರಿಗೆ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸಿ ಬಸ್‍ಗಳು ಡಿಪೋ ಬಿಟ್ಟು ಕದಲಿರಲಿಲ್ಲ.ಮದ್ಯದ ಮೂರು ದಿನಗಳು ಲಾಕ್‍ಡೌನ್ ಸಡಿಲಿಕೆಯಿಂದ ಬಸ್ ಓಡಾಟ ನಡೆಸಿದರು ಮತ್ತೆ ಮೂರು ನಾಲ್ಕು ದಿನಗಳಲ್ಲಿಯೇ ಬಂದ್ ಮಾಡಲಾಗಿತ್ತು.ಆದರೆ ಈಗ ರಾಜ್ಯ ಸರಕಾರ ಮತ್ತೆ ಅಂತರ ಜಿಲ್ಲಾ ಸಾರಿಗೆ ಆರಂಭಿಸಿದೆ ಆದರೆ ಜನರು ಮಾತ್ರ ಮನೆಯಿಂದ ಹೊರ ಬರದೆ ಕುಳಿರಿದ್ದಾರೆ.
ನಗರದ ಬಸ್ ನಿಲ್ದಾಣಕ್ಕೆ ಬೆಳಿಗ್ಗೆ ಏಳು ಗಂಟೆಗೆ ಬಸ್‍ಗಳು ತಂದು ಚಾಲಕರು ಮತ್ತು ನಿರ್ವಾಹಕರು ಜನರಿಗಾಗಿ ಕಾದು ಕುಳಿತರು.ಆದರೆ ಬಸ್ ಹತ್ತಲು ಪ್ರಯಾಣಿಕರೆ ಬಾರದೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿರುವಂತಿತ್ತು.ಅಲ್ಲದೆ ಜನರಿಗಾಗಿ ಕಾದು ಕುಳಿತಿದ್ದ ಚಾಲಕ ನಿರ್ವಾಹಕರು ಗೇಲಿ ಮಾಡುತ್ತಾ ಟೈಂ ಪಾಸ್ ಮಾಡುತ್ತಿರುವುದು ಕಂಡುಬಂತು.
ಇದರ ಮದ್ಯೆ ಕೊರೊನಾ ವೈರಸ್ ಭೀತಿಯಿಂದ ನಗರಸಭೆಯಿಂದ ಬಸ್ ನಿಲ್ದಾಣದಲ್ಲಿ ಸ್ಯಾನಿಟೈಜರ್ ಸಿಂಪರಣೆ ಮಾಡಿ ಸ್ವಚ್ಛಗೊಳಿಸಲಾಯಿತು. ಪ್ರಯಾಣಿಕರಿಲ್ಲದಿದ್ದರು ಬಸ್ ನಿಲ್ದಾಣವಾದರು ಶುಚಿಯಾಯ್ತು ಎಂದು ಸಾರಿಗೆ ನೌಕರರು ಮಾತನಾಡಿಕೊಳ್ಳುತ್ತಿದ್ದರು.