ಕಲಬುರಗಿ: ಕರೋನಾ ಮಹಾಮಾರಿಯಿಂದಾಗಿ ಲಾಕ್ಡೌನ್ ಪರಿಣಾಮದಿಂದ ವೀರಗಾಸೆ ಪುರವಂತರು ಕಲಾವಿದರು ಆದಾಯ ಮೂಲಗಳಿಂದ ವಂಚಿತರಾಗಿರುವವರಿಗೆ ಪ್ಯಾಕೇಜ್ ಮತ್ತು ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಶ್ರೀ ರಾಚೋಟಿ ವೀರಭದ್ರೇಶ್ವರ ಪುರವಂತರ ಸಂಘವು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗಂಗಾಧರ ಶರಬಯ್ಯಾ ಅಗ್ಗಿಮಠ, ಉಪಾಧ್ಯಕ್ಷ ವೀರಭದ್ರಯ್ಯ ಹಿರೇಮಠ, ಕಾರ್ಯದಶಿ ನಿಜಲಿಂಗಮೂರ್ತಿ ಜಿ. ಅಗ್ಗಿಮಠ ಇದ್ದರು.