ದಾಖಲೆ ಹಾಜರುಪಡಿಸಿ ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಲು ಸೂಚನೆ

0
61

ಕಲಬುರಗಿ: ಮಿನಿ ವಿಧಾನ ಸೌಧದ ಹಿಂದುಗಡೆಯಿರುವ ಸಂಚಾರಿ ಪೊಲೀಸ್ ಠಾಣೆ-1ರ ಆವರಣದಲ್ಲಿ ವಾರಸುದಾರರಿಲ್ಲದ ಒಟ್ಟು 24 ದ್ವಿಚಕ್ರ ವಾಹನಗಳಿರುತ್ತದೆ. ಸಂಬಂಧಪಟ್ಟ ದ್ವಿಚಕ್ರ ವಾಹನಗಳ ಮಾಲೀಕರು ತಮ್ಮ ವಾಹನದ ಅಗತ್ಯ ದಾಖಲೆಗಳನ್ನು ಕಲಬುರಗಿ ಸಂಚಾರಿ ಠಾಣೆಗೆ ಹಾಜರುಪಡಿಸಿ ತಮ್ಮ ವಾಹನಗಳನ್ನು ತೆಗೆದುಕೊಂಡು ಹೋಗಬೇಕೆಂದು ಕಲಬುರಗಿ ಸಂಚಾರಿ ಪೊಲೀಸ್ ಠಾಣೆ-1ರ ಪೊಲೀಸ್ ನಿರೀಕ್ಷಕರು ತಿಳಿಸಿದ್ದಾರೆ.

ಕಲಬುರಗಿ ಒಂದನೇ ಹೆಚ್ಚುವರಿ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆದೇಶ ಪ್ರಕಾರ ಈ ಪ್ರಕಟಣೆ ಹೊರಡಿಸಿದ ಒಂದು ತಿಂಗಳ ನಂತರ ಹರಾಜಿನ ಮೂಲಕ ಈ ವಾಹನಗಳನ್ನು ವಿಲೇವಾರಿ ಮಾಡಲಾಗುವುದು. ಉಳಿದ ದ್ವಿಚಕ್ರ ವಾಹನಗಳನ್ನು 2020ರ ಜೂನ್ 21 ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ಮಿನಿ ವಿಧಾನ ಸೌಧದ ಆವರಣದಲ್ಲಿರುವ ಸಂಚಾರಿ ಪೊಲೀಸ್ ಠಾಣೆ-1ಯಲ್ಲಿ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುತ್ತದೆ.

Contact Your\'s Advertisement; 9902492681

ಈ ಹರಾಜಿನಲ್ಲಿ ಭಾಗವಹಿಸಲಿಚ್ಛಿಸುವ ಆಸಕ್ತರು ಹರಾಜು ನಡೆಯುವ ಮೂರು ದಿನಗಳ ಮುಂಚಿತವಾಗಿ ಠಾಣೆಯಲ್ಲಿ ಮುಂಗಡವಾಗಿ 5,000 ರೂ. ಹಣವನ್ನು ಪಾವತಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ದ್ವಿಚಕ್ರ ಖರೀದಿ ಮಾಡದೇ ಇದ್ದಲ್ಲಿ ಈ ಮುಂಗಡ ಹಣವನ್ನು ಮರಳಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸಂಬಂಧಪಟ್ಟ ವಾಹನಗಳ ಮಾಲೀಕರು ವಾಹನ ಮಾದರಿ, ವಾಹನ ಸಂಖ್ಯೆ ಮತ್ತಿತರ ಹೆಚ್ಚಿನ ಮಾಹಿತಿಯನ್ನು ಕಲಬುರಗಿ ಮಿನಿ ವಿಧಾನ ಸೌಧದ ಆವರಣದಲ್ಲಿರುವ ಸಂಚಾರಿ ಪೊಲೀಸ್ ಠಾಣೆ-1ಕ್ಕೆ ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here