ಸರಳ ರಂಜಾನ್ ಆಚರಣೆಗೆ ಮೋದಿನ್ ಪಟೇಲ್ ಮನವಿ

0
29

ಕಲಬುರಗಿ: ಇಡೀ ವಿಶ್ವವೇ ಕೊರೋನ ಮಹಾಮಾರಿ ವಿರುದ್ಧ ಹೋರಾಡುತ್ತಿದೆ. ಇಂತಹ ಸಂದರ್ಭದಲ್ಲಿಯೆ ಪವಿತ್ರ ರಂಜಾನ್ ಮಾಸವನ್ನು ಇಲ್ಲಿವರೆಗೆ ಎಲ್ಲಾ ಬಾಂಧವರು ಕೊರೋನ ವಿರುದ್ಧ ಹೋರಾಡುತ್ತಲೇ ತಮ್ಮ ತಮ್ಮ ಉಪವಾಸಗಳನ್ನು ಪೂರ್ತಿ ಮಾಡಿ ಹಬ್ಬವನ್ನು ಆಚರಿಸಲು ಸಿದ್ಧವಾಗಿದೇವೆ ಎಂದು ನಯಾ ಸವೇರ ಸಂಘಟನೆ ಅಧ್ಯಕ್ಷರಾದ ಮೋದಿನ್ ಪಟೇಲ ಅಣಬಿ ತಿಳಿಸಿದ್ದಾರೆ.

ದೇಶದಲ್ಲಿ 36 ಗಂಟೆಗಳ ಕಾಲ ಸಂಪೂರ್ಣ  ಕರ್ಫ್ಯೂ ಇರುವ ಕಾರಣ ಹೊರಗಡೆ ಹೊರಗಡೆ ಬರದೇ ಸರ್ಕಾರದ ನಿಯಮಗಳನ್ನು ಪಾಲಿಸಿ ಎಂದು ಅವರು ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಯಾರು ಸಾಮೂಹಿಕವಾಗಿ ಈದ್ಗಾ, ಮಸೀದಿ ಮತ್ತು ದರ್ಗಾಗಳಲ್ಲಿ ನಮಾಜ್ ಮಾಡಬೇಡಿ, ತಮ್ಮ ತಮ್ಮ ಮನೆಗಳಲ್ಲಿಯೇ ನಮಾಜ್ ಮಾಡಿ, ಹಬ್ಬದ ದಿನ ಶುಭ ಕೋರಲು ಕೈ ಕುಲುಕುವುದು ಮತ್ತು ಸ್ನೇಹಿತರನ್ನು ತಬ್ಬಿಕೊಳ್ಳುವುದು ಬೇಡ, ದೂರದಿಂದಲೇ ಶುಭಕೋರಿ, ಸಾಧ್ಯವಾದಲ್ಲಿ ಮೋಬೈಲ್ ಮುಖಾಂತರವೇ ಶುಭಾಶಯ ವಿನಿಮಯ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ.

ಹಬ್ಬದ ಅಡುಗೆ ಔತಣ ಕೂಟ ನೀಡಲು ಯಾರನ್ನು ನಿಮ್ಮ ಮನೆಗೆ ಕರೆಯಬೇಡಿ ಮತ್ತು ನೀವು ಯಾರ ಮನೆಗೂ ಹೋಗಬೇಡಿ. ನಿಮ್ಮ ಮನೆಯ ಸದಸ್ಯರುಗಳೊಂದಿಗೆ ಊಟ ಮಾಡಿ, ಸ್ನೇಹಿತರೆ ಮಾಡಿದ ಮನವಿಗಳನ್ನು ನೀವು ಪಾಲಿಸಿ ಮಹಾಮಾರಿ ಕೊರೋನ ವಿರುದ್ಧ ಹೋರಾಡಲು ಸಹಕರಿಸಬೇಕೆಂದು ಕೊರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here