ಪಾಳಾ ಜನಕಲ್ಯಾಣ ಟ್ರಸ್ಟ್ : ‘ಬಸವ ಪುರಸ್ಕಾರ’ಕ್ಕೆ ಆಯ್ಕೆ

1
118

ಕಲಬುರಗಿ: ಶ್ರೀ ಸುಭಾಷಚಂದ್ರ ಪಾಟೀಲ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ ಪಾಳಾ ವತಿಯಿಂದ ಕೊಡಮಾಡುವ ಎರಡನೇ ವರ್ಷದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಹಾಗೂ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ‘ಬಸವ ಪುರಸ್ಕಾರ’ಕ್ಕೆ ಲೇಖಕರನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ ಪಾಳಾ ತಿಳಿಸಿದ್ದಾರೆ.

ರಾಷ್ಟ್ರೀಯ ಬಸವ ಪುರಸ್ಕಾರಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರೂ ಆಗಿರುವ ಹಿರಿಯ ವಿದ್ವಾಂಸರಾದ ಡಾ. ವಿ.ಜಿ.ಪೂಜಾರ ಅವರ ‘ಶಿವಶರಣರ ಸ್ವರ ವಚನ ಸಾಹಿತ್ಯ’ ಮತ್ತು ಕಾದಂಬರಿಕಾರ ಮದನ್ ಪಟೇಲ್ ಬೆಂಗಳೂರು ಅವರ ‘ಮಹಾಮಾಯೆ’ ಹಾಗೂ ಹಿರಿಯ ಲೇಖಕಿ ಡಾ.ಅಮೃತಾ ಕಟಕೆ ಅವರ ‘ಮಹಿಳಾ ಅಭಿವ್ಯಕ್ತಿ’ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪುರಸ್ಕಾರವು ಒಂದೂವರೆ ತೊಲೆ ಬೆಳ್ಳಿ, ಸನ್ಮಾನ, ಗೌರವ ಪತ್ರ ಮತ್ತು ಮೊಮೆಂಟೋ ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ರಾಜ್ಯ ಮಟ್ಟದ ಬಸವ ಪುರಸ್ಕಾರಕ್ಕೆ ಮೂವರನ್ನು ಆಯ್ಕೆ ಮಾಡಲಾಗಿದ್ದು, ಹಿರಿಯ ಲೇಖಕರಾದ ಡಾ.ಕಲ್ಯಾಣರಾವ ಪಾಟೀಲ ಅವರ ‘ಡಾ.ಎಂ.ಎಂ.ಕಲಬುರಗಿ ಅವರ ಶೋಧಗಳು’ ಮತ್ತು ಬಾಗಲಕೋಟೆಯ ಬದರಿನಾಥ ಜಹಾಗೀರದಾರ ಅವರ ‘ಮೌನ ಮೆರವಣಿಗೆ’ ಹಾಗೂ ಶ್ರೀಮತಿ ದಾಕ್ಷಾಯಿಣಿಮಠ ಬಳಬಟ್ಟಿ ಅವರ ‘ಮಹಾಶರಣ’ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪುರಸ್ಕಾರವು ಒಂದು ತೊಲೆ ಬೆಳ್ಳಿ, ಸನ್ಮಾನ, ಗೌರವ ಪತ್ರ ಮತ್ತು ಮೊಮೆಂಟೋ ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ಬಸವ ಪುರಸ್ಕಾರಕ್ಕೆ ಐವರನ್ನು ಆಯ್ಕೆ ಮಾಡಲಾಗಿದ್ದು, ಡಾ.ಚಿ.ಸಿ.ನಿಂಗಣ್ಣ ಅವರ ‘ಕಡೆಗೀಲು ಬಂಡಿಗಾಧಾರ’, ಪ್ರೇಮಾ ಹೂಗಾರ ಅವರ ‘ಹಾಯ್ಕುಗಳು’, ಶರಣು ಅತನೂರ ಅವರ ‘ಒಡಲ ನೋವಿನ ಧ್ವನಿ’, ಮೋಹನ ಎಸ್.ಮರಗುತ್ತಿ ಅವರ ‘ಜನ್ಮಗ್ರಂಥ’ ಹಾಗೂ ನೀಲಮ್ಮ ಹಿರೇಮಠ ಅವರ ‘ಹೊಸದು’ ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಈ ಪುರಸ್ಕಾರವು ಅರ್ಧ ತೊಲೆ ಬೆಳ್ಳಿ, ಸನ್ಮಾನ, ಗೌರವ ಪತ್ರ ಮತ್ತು ಮೊಮೆಂಟೋ ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here