ದಿನಗೂಲಿ ನೌಕರರಿಗೆ ಗ್ರ್ಯಾಚ್ಯೂಟಿ: ಹಿರೇಮಠ ಸಂತಸ

0
346

ಕಲಬುರಗಿ: ಸರಕಾರದ ವಿವಿಧ ಇಲಾಖೆಗಳಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿ ಕಾಯಂಗೊಂಡ ಸುಮಾರು 23 ಸಾವಿರ ಅರ್ಹ ದಿನಗೂಲಿ ನೌಕರರಿಗೆ ಗ್ರ್ಯಾಚ್ಯೂಟಿ ನೀಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ಶ್ರಮಜೀವಿಗಳ ವೇದಿಕೆ ರಾಜ್ಯಾಧ್ಯಕ್ಷ ಚಂದ್ರಶೇಖರ ಹಿರೇಮಠ ತಿಳಿಸಿದರು.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

Contact Your\'s Advertisement; 9902492681

ಈ ಕುರಿತು ಮೇ 16, 2019ರ ರಾಜ್ಯ ಪತ್ರ ದಲ್ಲಿ ಅಧಿಸೂಚನೆ ಪ್ರಕಟಗೊಂಡಿದೆ.‌ ದಿನಗೂಲಿ ನೌಕರ ರ ಈ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಹೋರಾಟ ಸಮಿತಿ ಹಾಗೂ ಶ್ರಮಜೀವಿಗಳ ವೇದಿಕೆ ಕಳೆದ ೨ ವರ್ಷಗಳಿಂದ ಉಪಧನ ಮತ್ತು ಪಿಂಚಣಿ ನೀಡುವಂತೆ ಆಗ್ರಹಿಸಿ ಒತ್ತಾಯ ಮತ್ತು ಹೋರಾಟ ಮಾಡುತ್ತಲೇ ಬಂದಿರುವುದರ ಪರಿಣಾಮ ಈ ಫಲಶೃತಿ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸರ್ಕಾರದ ಈ ನಿರ್ಧಾರದಿಂದಾಗಿ ಜಿಲ್ಲೆಯ 4ರಿಂದ ನಾಲ್ಕುವರೆ ಸಾವಿರ ದಿನಗೂಲಿ ನೌಕರರಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.

ನಿವೃತ್ತಿ ಹೊಂದಿದ ನಾಲ್ಕು ಲಕ್ಷಕ್ಕೂ ಅಧಿಕ ನೌಕರರಿಗೂ ಈ ಉಪಧನ ದೊರೆಯಲಿದೆ ಎಂದು ಅವರು ವಿವರಿಸಿದರು. ದಿನಗೂಲಿ ನೌಕರರಿಗೆ ಪಿಂಚಣಿ ಸಹ ದೊರೆಯಬೇಕಾಗಿದ್ದು, ಇದಕ್ಕಾಗಿ ಮೊದಲಿನಿಂದಲೂ ಹೋರಾಟ ಮಾಡುತ್ತ ಬರಲಾಗಿದೆ. ಪಿಂಚಣಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here