ಕಾರ್ಮಿಕರ ಕೆಲಸದ ಸಮಯ ಎಂಟು ತಾಸು ನಿಗದಿಗೆ ಸಿಐಟಿಯು, ಐ.ಎನ್.ಟಿ.ಯು.ಸಿ ಆಗ್ರಹ

0
166

ಸೇಡಂ: ತಾಲೂಕಿನ ಅಲ್ಟ್ರಾಟೇಕ್ ಸಿಮೆಂಟ್ ಕಂಪನಿ ಮತ್ತು ವಾಸವದತ್ತ ಸಿಮೆಂಟ್ ಕಂಪನಿಯ ಕಾರ್ಮಿಕರ ಸಂಘ ದಿಂದ  ಕೇಂದ್ರ ಮತ್ತು ರಾಜ್ಯ ಸರ್ಕಾರವು ಮೂರು ತಿಂಗಳ ಅವಧಿಗೆ ಕಾರ್ಮಿಕರು ಎಂಟು ತಾಸು ಬದಲು ಹತ್ತು ತಾಸು ಕಾರ್ಯ ನಿರ್ವಹಿಸುವ ಆದೇಶವನ್ನು ಜಾರಿ ಮಾಡಿರುವ ಆದೇಶ ವಿರೋಧಿಸಿ, ಆದೇಶ ವಾಪಸ್ ಪಡೆಯಬೇಕೆಂದು ಎಂದು CITU ಮತ್ತು  INTUC ಸಂಘಟನೆಗಳ ನೇತೃತ್ವದಲ್ಲಿ ಸಹಾಯಕ ಆಯಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ನಂತರ ಈ ಮಿಡಿಯಾ ಲೈನ್ ಜೋತೆ ಮಾತನಾಡಿದ ರಾಜಶ್ರೀ ಸಿಮೆಂಟ್ ಕಂಪನಿಯ CITU  ಅಧ್ಯಕ್ಷ   ಜಮೀಲ್ ಅಲಂಪುರಿ ಮಾತನಾಡಿ, ಕಾರ್ಮಿಕರು ಎಂಟು ತಾಸು ಕಾರ್ಯಕ್ಕೆ ಕಾರ್ಖಾನೆಯಲ್ಲಿ ಕೆಲಸ ಮಾಡಿ ಕೋಟ್ಯಂತರ ಲಾಭಕ್ಕೆ ಶ್ರಮಿಸುತ್ತಾರೆ. ಆದರೆ ಸೂಕ್ತ ವೇತನ ಸಿಗುವುದಿಲ್ಲ, ಆಡಳಿತ ಮಂಡಳಿಯ ಕಾರ್ಮಿಕರಿಗೆ ಕಾರ್ಯಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳತ್ತಾರೆ ಎಂದು ತಿಳಿಸಿದರು.

Contact Your\'s Advertisement; 9902492681

ಕಂಪೆನಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಎರಡು ತಾಸು ಹೆಚ್ಚು ಕಾರ್ಯ ನಿರ್ವಾಹಿಸುವಂತೆ ಕಂಪನಿ ಆಡಳಿತಕ್ಕೆ ಸುತ್ತೆಲೆಯನ್ನು ಹೊರಡಿಸಿದೆ, ಇದು ಕಾರ್ಮಿಕರ ವಿರುದ್ಧ ಆದೇಶ ಹೊಂದಿದೆ. ಸರ್ಕಾರ ಆದೇಶವನ್ನು ಹಿಂಪಡೆಯಬೇಕು ಮೊದಲಿನಂತೆ ಎಂಟು ತಾಸು ಅವಧಿಯನ್ನು ಮುಂದುವರಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ CITU ಪ್ರಧಾನ ಕಾರ್ಯದರ್ಶಿ ಆಯಿಪ್ಪಾ, ಲಕ್ಷ್ಮಣ ಚವಾಣ್, ವಲ್ಲಿ ಅಹ್ಮದ, ಭೀಮಾಶಂಕರ ಕೆ, ಮಲ್ಲಪ್ಪ ಎಮ್, ಹರಿಸಿಂಗ ಜಾಧವ್, ಮತ್ತು INTUC ಉಪ ಅಧ್ಯಕ್ಷರು ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here