ಅಕಾಲಿಕವಾಗಿ ಬಿದ್ದ ಮಳೆಗೆ ಅನೇಕ ಗುಡಿಸಲುಗಳು ನೆಲಸಮ ಅಪಾರ ನಷ್ಟ

0
56

ಸುರಪುರ: ಅಕಾಲಿಕವಾಗಿ ಸುರಿದ ಮಳೆ ಮತ್ತು ಗಾಳಿಗೆ ತಾಲೂಕಿ ಬೈರಿಮರಡಿ ಗ್ರಾಮದಲ್ಲಿನ ಅನೇಕ ಗುಡಿಸಲುಗಳ ತಗಡುಗಳು ಹಾಗೂ ತೋಟದಲ್ಲಿ ಬೆಳೆಯಲಾದ ನಿಂಬೆ ಮರಗಳು ನೆಲಕ್ಕುರುಳಿವೆ.ಅಲ್ಲದೆ ಬಲಭೀಮ ನಾಯಕ ಅವರ ತೋಟದಲ್ಲಿ ಹಾಕಲಾಗಿದ್ದ ಪಾಲಿ ಹೌಸ್ ಕೂಡ ನೆಲಸಮವಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ.

ಜೋರಾಗಿ ಬೀಸಿದ ಗಾಳಿಗೆ ಗ್ರಾಮದಲ್ಲಿನ ಮರಗಳು ನೆಲಕ್ಕುರುಳಿವೆ.ಬಡ ಕುಟುಂಬಗಳು ಹಾಕಿಕೊಂಡಿದ್ದ ತಗಡಿನ ಗುಡಿಸಲುಗಳು ಬಿದ್ದು ತಗಡುಗಳು ಗಾಳಿಗೆ ಹಾರಿ ಹೋಗಿವೆ ಇದರಿಂದ ಬಡ ಜನತೆಗೆ ದೊಡ್ಡ ಮಟ್ಟದ ನಷ್ಟವುಂಟಾಗಿದೆ,ಕೂಡಲೆ ಸರಕಾರ ಬಡವರಿಗೆ ಮನೆ ನಿರ್ಮಿಸಿಕೊಡುವ ವ್ಯವಸ್ಥೆ ಮಾಡಬೇಕು ಅಲ್ಲದೆ ರೈತರ ಜಮೀನನಲ್ಲಿ ತೋಟಗಾರಿಕೆ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಸರಕಾರಕ್ಕೆ ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಗ್ರಾಮಕ್ಕೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಪ್ರದೀಪ ನಾಲ್ವಡೆ ಭೇಟಿ ನೀಡಿದ್ದು ಹಾನಿಯಾದ ಬಗ್ಗೆ ವರದಿ ಕಲೆಹಾಕುವ ಕಾರ್ಯ ಆರಂಭಿಸಿದ್ದು,ಗ್ರಾಮದಲ್ಲಿ ಹಾನಿಗೊಳಗಾದ ಮನೆಗಳು ಹಾಗು ಬೆಳೆ ನಷ್ಟದ ಬಗ್ಗೆ ವರದಿ ತಯಾರಿಸಿ ತಹಸೀಲ್ದಾರರಿಗೆ ನೀಡುವುದಾಗಿ ಗ್ರಾಮ ಲೆಕ್ಕಿಗ ಪ್ರದೀಪ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here