ಬಲಶೆಟ್ಟಿಹಾಳ ಕೊರೊನಾ ವಾರಿಯರ್ಸ್‍ಗೆ ಕರ್ನಾಟಕ ರಕ್ಷಣಾ ವೇದಿಕೆ ಸನ್ಮಾನ

0
69

ಸುರಪುರ: ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿನ ಕ್ವಾರಂಟೈನ್‍ಲ್ಲಿನ ವಲಸೆ ಕಾರ್ಮಿಕರ ಸೇವೆಗೆ ಹಾಗೂ ಗ್ರಾಮದ ಜನರಲ್ಲಿ ಕೊರೊನಾ ಹರಡದಂತೆ ಮುಂಜಾಗ್ರತೆ ವಹಿಸಲು ನಿರಂತರವಾಗಿ ಶ್ರಮಿಸುತ್ತಿರುವ ವಿವಿಧ ಇಲಾಖೆಯ ಕೊರೊನಾ ವಾರಿಯರ್ಸ್‍ಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸನ್ಮಾನಿಸಲಾಯಿತು.

ಆರೋಗ್ಯ ಇಲಾಖೆ ಅಂಗನವಾಡಿ,ಆಶಾ ಕಾರ್ಯಕರ್ತೆಯರು,ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗು ಶಿಕ್ಷಕರಿಗೆ ಸನ್ಮಾನಿಸಿ ಫಲಹಾರ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಿದ್ದಣ್ಣ ಮಾಳಿ ಮಾತನಾಡಿ,ಇಂದು ಕೊರೊನಾ ಎಂಬ ವೈರಸ್ ಮಹಾಮಾರಿಯಾಗಿ ಇಡೀ ಜಗತ್ತನ್ನು ಕಾಡುತ್ತಿದೆ.ಇದರ ನಿರ್ಮೂಲನೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗು ಸಿಬ್ಬಂದಿ ಹಗಲಿರಳು ಶ್ರಮಿಸುತ್ತಿದ್ದಾರೆ.ಅದರಂತೆ ನಮ್ಮ ಗ್ರಾಮದಲ್ಲಿಯೂ ಸಹ ಜನರಿಗೆ ಕೊರೊನಾ ಹರಡದಂತೆ ಮುಂಜಾಗ್ರತೆಗಾಗಿ ಹಾಗೂ ಕ್ವಾರಂಟೈನಲ್ಲಿರುವವರ ಸೇವೆಯನ್ನು ಮಾಡುತ್ತಿರುವ ಆರೋಗ್ಯ ಇಲಾಖೆ,ಅಂಗನವಾಡಿ ಆಶಾ ಕಾರ್ಯಕರ್ತೆಯರು,ಗ್ರಾಮ ಪಂಚಾಯತಿ ಸಿಬ್ಬಂದಿ,ಶಿಕ್ಷಕರು ಮತ್ತು ವಿಶೇಷವಾಗಿ ಪೊಲೀಸ್ ಇಲಾಖೆಯ ಶ್ರಮ ಮುಖ್ಯವಾಗಿದೆ.ಇವರೆಲ್ಲರನ್ನು ನಾವು ನಿತ್ಯವು ಸ್ಮರಿಸಬೇಕೆಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಎಲ್ಲಾ ವಾರಿಯರ್ಸ್‍ಗೆ ಶಾಲು ಹೊದಿಸಿ ಸನ್ಮಾನಿಸಿ ಫಲಹಾರ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಪಿಡಿಒ ಸಿದ್ರಾಮಪ್ಪ ಪಾಟೀಲ್,ಗ್ರಾಮ ಲೆಕ್ಕಿಗರಾದ ಮುಬಿನ್,ರಾಜು ಅವರಾಧಿ,ನಾಗೇಶ ಗೊಡ್ರಿ,ಸಾಬಣ್ಣ ಕ್ಯಾತನಾಳ,ಯಮನುರಿ ಮನಗಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here