ಸುರಪುರ: ಇಬ್ಬರು ಕೊರೊನಾ ಸೊಂಕಿತರನ್ನು ಹಾಗು ಅವರು ಪ್ರಾಥಮಿಕ ಸಂಪರ್ಕ ಹೊಂದಿದ್ದ ಇಬ್ಬರು ವ್ಯಕ್ತಿಗಳನ್ನು ಹೈ ಸೊಲೇಶನ್ ಸೆಂಟರ್‍ಗೆ ಕಳುಹಿಸಲಾಗಿದ್ದು ಗ್ರಾಮದ ಜನತೆ ಆತಂಕಪಡುವ ಅವಶ್ಯವಿಲ್ಲ ಎಂದು ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಹೇಳಿದರು.
ಶನಿವಾರ ಇಬ್ಬರಲ್ಲಿ ಕೊರೊನಾ ಸೊಂಕು ಕಾಣಿಸಿಕೊಂಡ ಹಿನ್ನೆಲೆ ಭಯಭೀತರಾಗಿದ್ದ ತಾಲೂಕಿನ ಅಡ್ಡೊಡಗಿ ಗ್ರಾಮಕ್ಕೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಿ ಮಾತನಾಡಿ,ಸೂಗುರು ದಿಗ್ಬಂಧನ ಕೇಂದ್ರದಿಂದ ಇಬ್ಬರು ವ್ಯಕ್ತಿಗಳು ಮದ್ಹ್ಯಾನ ಬಂದಿದ್ದರು ರಾತ್ರಿ ಅವರಲ್ಲಿ ಕೊರೊನಾ ಸೊಂಕು ಇರುವ ಬಗ್ಗೆ ವರದಿ ಬಂದ ನಂತರ ಅವರನ್ನು ಕರೆದೊಯ್ಯಲಾಗಿದೆ,ಆದ್ದರಿಂದ ಯಾರೂ ಆತಂಕ ಪಡುವ ಅಗ್ತಯವಿಲ್ಲ ಎಂದರು.
ನಂತರ ಕೊರೊನಾ ಸೊಂಕಿತರ ಕುಟುಂಬಗಳಿಗೂ ಭೇಟಿ ನೀಡಿ ಅವರೆಲ್ಲರಿಗೂ ಆರಾಮವಾಗಿ ಬರಲಿದ್ದಾರೆ,ಹದಿನಾಲ್ಕು ದಿನಗಳ ಮಟ್ಟಿಗೆ ತಾವು ಯಾವುದೇ ರೀತಿಯ ಚಿಂತೆಗೀಡಾಗದಂತೆ ಧೈರ್ಯ ತುಂಬಿದರು.ಅಲ್ಲದೆ ಹೊರ ರಾಜ್ಯದಿಂದ ಬಂದು ಗೃಹ ದಿಗ್ಬಂಧನ್ಕಕೊಳಗಾದವರ ಕುಟುಂಬಗಳಿಗೆ ಭೇಟಿ ನೀಡಿ ಅವರಿಗೆ ಉಳಿದುಕೊಳ್ಳಲು ತಾತ್ಕಾಲಿಕ ಸೂರು ಕಲ್ಪಿಸಲು ಗ್ರಾಮ ಪಂಚಾಯತಿ ಅಭೀವೃಧ್ಧಿ ಅಧಿಕಾರಿ ಹಾಗು ಅಧ್ಯಕ್ಷರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಿಡಿಒ ಹುಸೇನ್ ಭಾಷಾ,ಅಧ್ಯಕ್ಷ ಹಣಮಂತ ಹಾಗು ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರಿದ್ದರು.