ರೈತರ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಸಾಮೂಹಿಕ ಸಂಘಟನೆಗಳ ಪ್ರತಿಭಟನೆ

0
42

ಸುರಪುರ: ಕಾರ್ಪೊರೇಟ್ ಸಂಸ್ಥೆಗಳ ಬೆನ್ನಿಗೆ ನಿಂತಿರುವ ಕೇಂದ್ರ ಸರಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗುವ ಮೂಲಕ ದೇಶದಲ್ಲಿನ ರೈತರನ್ನು ಸರ್ವನಾಶ ಮಾಡಲು ನಿಂತಿವೆ ಎಂದು ಎಐಟಿಯುಸಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ ಪತ್ತಾರ ಮಾತನಾಡಿದರು.

ನಗರದ ತಹಶಿಲ್ದಾರ ಕಛೇರಿ ಆವರಣದಲ್ಲಿ ಸಾಮೂಹಿಕ ಸಂಘಟನೆಗಳ ಸಮನ್ವಯ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರನ್ನು ಕಷ್ಟಕ್ಕೆ ಸಿಲುಕಿಸಿ ಕಾರ್ಪೋರೇಟ ಸಂಸ್ಥೆಗಳಿಗೆ ಲಾಭಮಾಡಿಕೊಡಲು ಅಧಿಕಾರಕ್ಕೆ ಬಂದಂತಿದೆ ಹಾಗೂ ರಾಜ್ಯ ಸರ್ಕಾರದ ಮಂತ್ರಿಯಾಗಿರುವ ಮಾದುಸ್ವಾಮಿಯವರು ಕೆಲವು ದಿನಗಳಹಿಂದೆ ಕೊಲಾರದ ರೈತ ಮಹಿಳೆಗೆ ಅವಹೇಳನಕಾರಿ ಪದಗಳನ್ನು ಬಳಸಿದ್ದು ಖಂಡನೀಯವಾಗಿದೆ, ಈ ರೀತಿಯಾಗಿ ಸಚಿವರು ಪದೆ ಪದೆ ಜನರ ಮನಸ್ಸಿಗೆ ನೊವಾಗುವ ರೀತಿ ವರ್ತಿಸಿದರು ಮುಖ್ಯಮಂತ್ರಿಗಳು ಇವರನ್ನು ಸಂಪುಟದಲ್ಲಿಟ್ಟುಕೊಂಡು ನಮ್ಮದು ರೈತರ ಸರ್ಕಾರ ಎಂದು ಬೀಗುತ್ತಿದ್ದಾರೆ ಮುಖ್ಯಮಂತ್ರಿಗಳಿಗೆ ನೈತಿಕತೆ ಇದ್ದರೆ ತಕ್ಷಣವೆ ರೈತ ಮಹಿಳೆಗೆ ಅವಹೇಳನ ಕಾರಿಯಾಗಿ ಮಾತನಾಡಿದ ಮಂತ್ರಿಯ ರಾಜಿನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ರೈತ ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ಮಾತನಾಡಿ ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸಿರುವುದು ಮತ್ತು ಕೈಗಾರಿಕಾ ವಲಯದಲ್ಲಿರುವ ಕಾರ್ಮಿರ ಮಿತಿಯನ್ನು ಹೆಚ್ಚಿಸಿ ಲೇ ಆಫ, ರಿಟ್ರೆಚಮೆಂಟ್ ಮತ್ತು ಕ್ಲೋಸರ್ ಗಳಿಗೆ ಸರ್ಕಾರ ಪೂರ್ವ ಅನುಮತಿ ನೀಡಿ ಕಾರ್ಮಿಕರನ್ನು ಹತ್ತುಕ್ಕುವ ಪ್ರಯತ್ನ ನಡೆಸುತ್ತಿವೆ. ಸರ್ಕಾರ ಈ ನಡೆಯು ರೈತ ವಿರೋಧಿ, ಕಾರ್ಮಿಕ ವಿರೋಧ ನಡೆಗಳಿಂದ ಎಷ್ಟೋ ಕುಟುಂಬಗಳು ಕೆಲಸವಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗುತ್ತವೆ ಆದ್ದರಿಂದ ಸರ್ಕಾರಗಳು ತೆಗೆದುಕೊಂಡಿರುವ ನಿರ್ಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಇದೇ ಸಂದರ್ಭದಲ್ಲಿ ರೈತ ಸಂಘದ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಮಹಾದೇವಮ್ಮ ಬೇವಿನಾಳಮಠ,ಶರಣಗೌಡ ಗೂಗಲ್,ಶಿವು ಸಾಹುಕಾರ,ಸಾಹೇಬಗೌಡ ಮದಲಿಂಗನಾಳ,ಹಣಮಂತ್ರಾಯ ಮಡಿವಾಳ,ಗೋವಿಂದ ಪತ್ತಾರ ಮಾತನಾಡಿದರು.

ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶಿಲ್ದಾರ ಕಛೇರಿ ಶಿರಸ್ತೆದಾರ ಸೋಮನಾಥ ನಾಯಕ ಅವರಿಗೆ ಸಲ್ಲಿಸಲಾಯಿತು. ತಿಪ್ಪಣ್ಣ ಜಂಪಾ, ವೆಂಕಟೇಶಗೌಡ, ಪರಮಣ್ಣ ಮೇಟಿ, ಮಲ್ಲಿಕಾರ್ಜುನ ಅಬ್ದುಲ್ ರೌಪ, ಖಂಡಪ್ಪ ಪೂಜಾರಿ, ಆನಂದ ಕಟ್ಟಿಮನಿ, ಮದನ ಷಾ, ಅಭೀದಿ ಪಗಡಿ, ದೇವಪ್ಪ ನಗರಗುಂಡಾ, ಮಲ್ಲಯ್ಯ ವಗ್ಗಾ, ಗುರಪ್ಪಗೌಡ ಹೊಸಗೌಡ್‍ರ, ಗುರುನಾಥ ರೆಡ್ಡಿ, ತಿಮ್ಮಯ್ಯ ತಳವಾರ ಸೇರಿದಂತೆ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here