ಕಲಬುರಗಿ: ಇಂದು ಬೆಳಿಗ್ಗೆ ಕಲಬುರಗಿತಾಲ್ಲೂಕಿನ ಹೊನ್ನ ಕಿರಣಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರೈತರ ಜಮೀನುಗಳಲ್ಲಿ ಮಹಾತ್ಮ ಗಾಂಧೀ ರಾಷ್ಟ್ರೀಯಉದ್ಯೊಗ ಖಾತರಿ ಯೊಜನೆಯಡಿಯಲ್ಲಿ ಬದು ನಿರ್ಮಾಣ ಕಾಮಗಾರಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ವೀಕ್ಷಿಸಿದರು.
ಈ ವೇಳೆಯಲ್ಲಿ ಜಿ.ಪಂ. ಅಧ್ಯಕ್ಷರಾದ ಸುವರ್ಣಾ ಮಾಲಾಜೆ, ಶಾಸಕರಾದ ಎಂ.ವೈ ಪಾಟೀಲ್, ಬಸವರಾಜ್ ಮತ್ತಿಮೂಡ್, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ್ , ಜಿ.ಪಂ. ಸಿ.ಇ.ಓ ಡಾ.ಪಿ.ರಾಜಾ ಇನ್ನಿತರರು ಇದ್ದರು.