ಕಲಬುರಗಿ: ನಗರದ ಅಂದ ಬಾಲಕರ ಶಾಲೆಯ ಎದುರುಗಡೆ ಆವರಣದಲ್ಲಿ ಕಲ್ಯಾಣ ಕರ್ನಾಟಕ ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೈಯ್ಯಾಳಕರ್ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಹಾಯಕ ಪೋಲಿಸ್ ಆಯುಕ್ತ ವಿಜಯಕುಮಾರ ವಿ.ಎಚ್, ಪಿಐ ರಮೇಶ ಕಾಂಬಳೆ, ರಮೇಶ ಸ್ವಾಮಿ, ಪವನ ತಾರಫೈಲ್, ಬಸವರಾಜ ಹೈಯ್ಯಾಳಕರ್, ಸಚಿನ ಫರಹತಾಬಾದ, ಮಂಜುನಾಥ ನಾಲವರಕರ್, ಮನೋಹರ ಬಿರನೂರ, ಯಂಕಪ್ಪ (ಅಕ್ಷಯ), ಮುತ್ತಣ್ಣ ಭಾಗೋಡಿ ಇದ್ದರು.