ಕಲಬುರಗಿ: ಇಂದಿನಿಂದ ಎಲ್ಲಾ ಮಸೀದಿಗಳು ತೆರೆಯಲು ಸರಕಾರದಿಂದ ಅವಕಾಶ ನೀಡಿದ್ದು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳ ಮಾರ್ಗ ಸೂಚಿಯಂತೆ ಎಲ್ಲಾ ರೀತಿಯ ಸಿದ್ಧತೆ ಮಾಡಲಾಗಿದೆ ಎಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ರಾಷ್ಟ್ರೀಯ ಮಿಲಿ ಕೌನ್ಸಿಲ್ ಸದಸ್ಯರಾದ ಡಾ. ಮಹಮ್ಮದ್ ಅಜಗರ್ ಚುಲಬುಲ್ ಅವರು ತಿಳಿಸಿದರು.
ಅವರು ರಾಷ್ಟ್ರೀಯ ಕಾರ್ಯಕಾರಿ ಸಮಿತಿ, ಅಖಿಲ ಭಾರತೀಯ ಮಿಲಿ ಕೌನ್ಸಿಲ್, ಹಾಗೂ ಅಖಿಲ ಭಾರತ ಮುಸ್ಲಿಂ ವ್ಯಕ್ತಿಕ ಮಂಡಳಿಯ ಸದಸ್ಯರು, ಉಲ್ಮಾಗಳು, ಬುದ್ಧಿ ಜೀವಿಗಳು ಹಾಗೂ ಮಸೀದಿ ಕಾರ್ಯಕಾರಿ ಸಮಿತಿಯ ಮುಖಂಡರೊಂದಿಗೆ ಸಭೆ ನಡೆಸಿ ತಿಳಿಸಿದರು.
ಸರಕಾರ ಅನುಮತಿಯನ್ನು ಈ ಸಂದರ್ಭದಲ್ಲಿ ಸ್ವಾಗತಿಸಿದ ಡಾ. ಚುಲಬುಲ್, ಇನ್ನೂ ಎರಡು ತಿಂಗಳು ಪ್ರತಿಯೊಬ್ಬರೂ ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡಿ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮ ವಹಿಸಬೇಕು. ಅನಾವಶ್ಯಕ ರಸ್ತೆಯ ಮೇಲೆ ಓಡಾಡಬಾರದು, ಸರಕಾರ ಈಗಾಗಲೇ ಎಲ್ಲಾ ತರಹದ ಲಾಕ್ ಡೌನ್ ತೆಗೆದಿದೆ.
ಆದರೆ ಮಹಾಮಾರಿ ಕೊರೊನಾ ಉಳಿದಿದ್ದು, ಎಂದು ಈ ನಿಟ್ಟಿನಲ್ಲಿ ಸಭೆಯಲ್ಲಿ ಡಾ. ಚುಲಬುಲ್ ಸರಕಾರ, ಇಲಾಖೆಯ ಹಾಗೂ ಧರ್ಮ ಗುರುಗಳ ಮಾರ್ಗ ಸೂಚಿ ಓದಿ ತಿಳಿಸಿದರು.
ನೂತನ ಮಾರ್ಗ ಸೂಚಿಯನ್ನು ಹ್ಯಾಂಡ್ ರೂಪದಲ್ಲಿ ತಯಾರಿಸಿ ಮಸೀದಿಗಳ ಸಮಿತಿಗೆ ಜಾಗೃತಿ ಮೂಡಿಸುವ ಕಾರ್ಯ ನಡೆಸುವ ಮೂಲಕ ಮಾರ್ಗ ಸೂಚಿಯನ್ನು ಪಾಲನೆ ಮಾಡಬೇಕೆಂದು ಮುಫ್ತಿ ಮೌಲಾನ ಅಬ್ದುಲ್ ರಜಾಕ್ ತಿಳಿಸಿದರು.
ಈ ಸಂದರ್ಭದಲ್ಲಿ ಅಲ್ ಇಂಡಿಯಾ ಮಿಲಿ ಕೌನ್ಸಿಲ್ ಜಿಲ್ಲಾ ಅಧ್ಯಕ್ಷರಾದ ಮೌಲಾನಾ ಗೌಸೊದ್ದೀನ್, ಜಿಲ್ಲಾ ರಜಾ ಅಕಾಡೆಮಿ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಅಜಗರ್, ಎ.ಐ.ಎಮ್.ಸಿ ಪ್ರಧಾನ ಕಾರ್ಯದರ್ಶಿ ಮೌಲಾನಾ ಶಫಿಕ್ ಅಹ್ಮದ್, ಮುಫ್ತಿ ಫೌಂಡೆಶನ್ ಸದಸ್ಯ ಮೌಲಾನಾ ಅಬ್ದುಲ್ ರಹಿಮ್, ಮೌಲಾನಾ ರಯಿಸ್, ನ್ಯಾಯವಾದಿ ವಾಹಾಜ ಬಾಬಾ, ಅಬ್ದುಲ್ ರಹಿಮ್ ಮಿರ್ಚಿ, ಜಾವೀದ್ ಖಾನ್, ಅತೀಕ್ ಎಜಾಜ್, ಮೊಹಮ್ಮದ್ ಜಾಫರ, ಯುಸುಫ್, ಮೌಲಾನಾ ಅಬ್ದುಲ್ ಲತೀಫ್, ಸೈಯದ್ ಪರವೇಜ್ ಸೇರಿದಂತೆ ಮುಂತಾದವರು ಇದ್ದರು.
ನೂತನ ಮಾರ್ಗ ಸೂಚಿ
- ಮನೆಯಲ್ಲೇ ವಜು ಮಾಡಿ ಮಸೀದಿಗೆ ಬರಬೇಕು.
- ತೀರ ಅಗತ್ಯವಿದರೆ ಮಾತ್ರ ಮಸೀದಿಯ ಶೌಚಾಲಯ ಬಳಸಬೇಕು.
- ಪ್ರತಿ ದಿನ ಇಂಶಾ ನಮಾಜ್ ನಂತರ ಮಸೀದಿ ತೊಳೆಯಬೇಕು.
- ಮಸೀದಿಗೆ ಬರುವವರು ಮಾಸ್ಕ್ ಅಥವಾ ಫೇಸ್ ಕವರ ಬಳಸಬೇಕು.
- ನಮಾಜ್ ಮಾಡುವಾಗ ಸಾಮಾಜಿ ಅಂತರ ಕಾಯ್ದುಕೊಳಬೇಕು.
- 65 ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿ ನಮಾಜ ಮಾಡಬೇಕು.
- ಮಸೀದಿಯಲ್ಲಿ ಫರ್ಜ್ ನಮಾಜ್ ಮಾತ್ರ ಮಾಡಬೇಕು. ನಫಿಲ್ ಮತ್ತು ಸುನ್ನತ ನಮಾಜ ಮನೆಯಲ್ಲಿ ಮಾಡಬೇಕು.
- ಮಸೀದಿಗೆ ಸ್ವಂತ ಜಾನಿಯಾ ನಮಾಜ ತಂದು ನಮಾಜ್ ಮಾಡಬೇಕು.
- ಮಸೀದಿಯ ಒಳಗ ಮತ್ತು ಹೊರಗಡೆ ಕೊರೊನಾ ಜಾಗೃತಿ ಪೋಸ್ಟರ್ ಬಳಸಬೇಕು.