ಸುರಪುರ: ವರ್ಷದ ಮಳೆಗಾಲದ ಆರಂಭದಲ್ಲಿಯೆ ಉತ್ತಮ ಮಳೆಯಾಗಿದ್ದರಿಂದ ತಾಲೂಕಿನಲ್ಲಿ ರೈತರ ಕೃಷಿ ಚಟುವಟಿಕೆಗಳು ಗರಿಗೆದರಿವೆ.ಜಮೀನುಗಳ ಹದಗೊಳಿಸುವ ಕಾರ್ಯ ಭರದಿಂದ ಸಾಗಿದ್ದು,ಬೀಜ ಗೊಬ್ಬರ ಖರೀದಿಯ ಭರಾಟೆಯು ಜೋರಾಗಿದೆ.ನಗರದ ತಿಮ್ಮಾಪುರದಲ್ಲಿನ ಸುರಪುರ ವಲಯದ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಬೀಜ ಖರೀದಿಗೆ ಮುಗಿಬಿದ್ದರು.
ಸೋಮವಾರ ಬೆಳಿಗ್ಗೆ ಬಂದಿದ್ದ ಅನೇಕ ಜನ ರೈತರು ಮುಂಗಾರು ಬಿತ್ತನೆಗೆ ಬೇಕಾಗುವ ತೊಗರಿ ಹೆಸರು ಸಜ್ಜೆ ಸೂರ್ಯಕಾಂತಿ ಮೆಕ್ಕೆಜೊಳ ಮುಂತಾದ ಬೀಜಗಳನ್ನು ಖರೀದಿಸಿದರು.ಈ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಡಾ: ಭೀಮರಾಯ ಹವಲ್ದಾರ್ ಮಾಹಿತಿ ನೀಡಿ,ಮುಂಗಾರು ಕೃಷಿಗೆ ಬೇಕಾಗುವ ಎಲ್ಲಾ ಬೀಜಗಳು ಲಭ್ಯವಿದ್ದು ರೈತರು ತಮಗೆ ಬೇಕಾದ ಬೀಜವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಈಗಾಗಲೆ ನಮ್ಮ ಭಾಗದ ರೈತರು ಹೆಚ್ಚಾಗಿ ಬೆಳೆಯುವ ತೊಗರಿ ಬೀಜ ಸುಮಾರು 50 ಕ್ವಿಂಟಾಲ್ ಬಂದಿದೆ.ಹೆಸರು 10 ಕ್ವಿಂಟಾಲ್ ಹಾಗೂ ಮೆಕ್ಕೆಜೋಳ,ಸೂರ್ಯಕಾಂತಿ,ಸಜ್ಜೆ ಬೀಗಳು ಲಭ್ಯವಿವೆ.ಅಲ್ಲದೆ ವರ್ಮಿ ಕಾಂಪೋಸ್ಟ್ ಗೊಬ್ಬರಕೂಡ ದೊರೆಯಲಿದೆ ಎಂದು ತಿಳಿಸಿದರು.ರೈತರು5 ಎಕರೆ ವರೆಗಿನ ಬಿತ್ತಣಿಕೆಗೆ ಬೇಕಾಗುವ ಬೀಜಕ್ಕೆ ಪಹಣಿ ಪತ್ರಿಕೆ ಆಧಾರ ಕಾರ್ಡ್ ತಪ್ಪದೆ ತಂದು ಪಡೆಕೊಳ್ಳಬಹದಾಗಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಅನೇಕ ಜನ ರೈತರಿಗೆ ತೊಗರಿ ಬೀಜಗಳನ್ನು ನೀಡಲಾಯಿತು.