ಕನ್ಯೆಯ ಕೆನ್ನೆ: ಇ-ಮೀಡಿಯಾ ಲೈನ್ ಕವಿತೆ

0
100
ಕನ್ಯೆಯ ಕೆನ್ನೆ
ಹಣೆಯಲ್ಲಿ ನಗುವ ಸಿಂಧೂರ
ಮುಡಿಯಲ್ಲಿ ನಗುವ ಮಂದಾರ
ಕೆನ್ನೆಯ ತುಂಬಾ ಕೆಂದಾವರೆ
ಈ ಕನ್ಯೆಯ ಕನಸೇ ತರಾವರೆ
ನೀ ಕಣ್ಣಿಗೆ ಕಾಡಿಗೆ ತೀಡಿ
ಕಣ್ಣಂಚಲಿ ನಾಟ್ಯವ ಮಾಡಿ
ಕಾಮನಬಿಲ್ಲಿನ ಹುಬ್ಬನು ತೋರಿ
ಕೈ ಕೊಟ್ಟು ಹೋಗಬೇಡ ನಾರಿ
ಕಿವಿಗೆ ಬಂಗಾರದೊಲೆ ಕೊಟ್ಟೆ
ಮೂಗಲಿ ಮುತ್ತಿನ ನತ್ತ ಇಟ್ಟೆ
ನಿನಗಾಗಿ ಬಂಧು ಬಳಗ ಬಿಟ್ಟೆ
ನಿನ್ನೀ ರೂಪಕೆ ಸೆರೆಯಾಗಿಬಿಟ್ಟೆ
ತುಂಬಿದ ಚೆಲುವಿನ ವದನ
ನಾನೇ ಕೇಳು ನಿನ್ನ ಮದನ
ಬೇಡ ಗೆಳತಿ ನಮ್ಮಲ್ಲಿ ಕದನ
ನಗುವಿಂದ ತುಂಬಲಿ ಸದನ
ಗಲ್ಲಕೆ ದೃಷ್ಟಿಯ ಬಟ್ಟು
ಬೆಲ್ಲವ ಕೆನ್ನೆಗೆ ಕೊಟ್ಟು
ಕನ್ಯೆ ಇವಳಲಿ ಪ್ರೀತಿಯನಿಟ್ಟೆ
ಬಂದಳು ಮನೆಗೆ ಬಲಗಾಲನಿಟ್ಟು

ಬಸವರಾಜ ಚೌಡ್ಕಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here