ರಾಯಚೂರು: ವಿದ್ಯಾರ್ಥಿ ಕುಮಾರ ನಾಯಕ್ ನ ಅಸಹಜ ಸಾವಿನ ಸಮಗ್ರ ತನಿಖೆ ಮತ್ತು ಅಪರಾಧಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು SFI ರಾಯಚೂರು ಜಿಲ್ಲಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ ಹಾಗೂ ವಿದ್ಯಾರ್ಥಿ ಪೋಷಕರು ಆಗ್ರಹಿಸಿದ್ದಾರೆ.
ಅವರು ನಗರದ ಪತ್ರಿಕಾ ಭವನದಲ್ಲಿ ಸಾವನಪ್ಪಿದ ವಿದ್ಯಾರ್ಥಿ ನಾಯಕ್ ಅವರ ಪೋಷಕರೊಂದಿಗೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾನವಿ ಪಟ್ಟಣದ ಲೋಯೊಲ ಕಾಲೇಜಿನಲ್ಲಿ ಬಿ.ಕಾಂ ನಾಲ್ಕನೆಯ ಸೆಮಿಸ್ಟರ್ ಓದುತ್ತಿರುವ ವಿದ್ಯಾರ್ಥಿ ಕುಮಾರ್ ನಾಯಕ ಮೇ 15 ರ ತಡ ರಾತ್ರಿ ಲೋಯೊಲ ಕಾಲೇಜ್ ಪಕ್ಕದ ಬೇವಿನ ಮರಕ್ಕೆ ನೇಣು ಹಾಕಿಕೊಂಡಿದಾನೆಂದು ಶಂಕಿಸಲಾಗಿತ್ತು. ಅದೇ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದ್ದು. ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡುಬಂದರೂ ಸಹ ಅಸಹಜ ಸಾವನಪ್ಪಿದ್ದು, ನಾಯಕ್ ಸಾವಿಗೆ ಹಲವು ರೀತಿಯ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ ಎಂದು ತಿಳಿಸಿದ್ದರು.
ನಮಗಿರುವ ಮುಖ್ಯ ಅನುಮಾನಗಳೆಂದರೆ ಹಾಲ್ ಟಿಕೇಟ್ ಬಂದಾಗಲೂ ಕೂಡ ಅದನ್ನು ನೀಡದೆ ಹಾಜರಾತಿಯ ಕೊರತೆಯ ನೆಪವೊಡ್ಡಿ ನಿರಾಕರಣೆ ಮಾಡಿದ್ದು ಶಿಕ್ಷಣ ವಿರೋಧಿ ಯಾಗಿದೆ. ವಿಶ್ವ ವಿದ್ಯಾಲಯವೇ ಹಾಲ್ ಟಿಕೇಟ್ ನೀಡಿರಬೇಕಾದರೆ ಕಾಲೇಜಿನವರು ಯಾಕೆ ತಡೆ ಹಿಡಿದರು? ಈ ಸಾವಿನ ವಿಚಾರದ ಮಾಹಿತಿಯನ್ನು ಗುಲ್ಬರ್ಗ ವಿಶ್ವವಿದ್ಯಾಲಕ್ಕೆ ಕಾಲೇಜು ನೀಡಿರುವುದಿಲ್ಲ ಎಂದು ಕುಲಪತಿಗಳೆ ಕಾಲೇಜಿಗೆ ಭೇಟಿ ನೀಡಿದಾಗ ಒಪ್ಪಿಕೊಂಡು ಕಾಲೇಜಿನ ಮೇಲೆ ಅಸಮಾಧಾನ ಹೊರಹಾಕಿದ್ದಾರು ಎಂದು ತಿಳಿಸಿದ್ದರು.
ಇನ್ನೂ ನೇಣು ಬಿಗಿದ ಸ್ಥಿತಿಯಲ್ಲಿದ್ದ ಆತನ ಶವ ಗಮನಿಸಿದಾಗ ಆತನೇ ಆತ್ಮಹತ್ಯೆ ಮಾಡಿಕೊಂಡಿರಲು ಸಾಧ್ಯವೇ ಇಲ್ಲ ಎಂದು ಪೋಷಕರು ಹಾಗೂ ಸಮಿತಿಯ ಸದಸ್ಯರು ವಿಶ್ವಸ ವ್ಯಕ್ತಪಡಿಸಿದ್ದರು.
ನಾಯಕ್ ವಾಸಿಸುತ್ತಿದ್ದ ಹಾಸ್ಟೇಲ್ ನಲ್ಲಿ ಸಿ.ಸಿ.ಕ್ಯಾಮರಾಗಳನ್ನು ಬಂದ್ ಮತ್ತು ಧ್ವಂಸ ಮಾಡಲಾಗಿದೆ. ಇತನನ್ನು ಯಾರಾದರೂ ಹತ್ಯೆ ಗೈದಿರಬಹುದು ಎಂದು ಅನುಮಾನ ಕಾಡುತ್ತಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆಯ ನಡೆಸುವ ಮೂಲಕ ಸತ್ಯಾ ಸತ್ಯತೆ ಹೋರತರಬೇಕೆಂದು ಅವರು ಒತ್ತಾಯಿದರು.
ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು, ಪ್ರಾಂಶಿಪಾಲರು, ಕ್ಲರ್ಕ್ ರನ್ನು ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳು ಸೇರಿದಂತೆ ಮೇಲ್ವಿಚಾರಕ, ಸಿಬ್ಬಂದಿ ಗಳನ್ನು ಸೂಕ್ತ ತನಿಖೆಗೆ ಒಳಪಡಿಸಿ, ಕಾಲೇಜು ಮತ್ತು ಹಾಸ್ಟೇಲ್ ನ ಸಿ.ಸಿ ಕ್ಯಾಮರಗಳ ಮಾಹಿತಿ ಸಂಗ್ರಹಿ ಅಪರಾಧಿಯನ್ನು ಶೀಘ್ರವಾಗಿ ಬಂಧಿಸಬೇಕು ಹಾಗೂ FIR ನಲ್ಲಿ ಕೆಲವೊಂದು ಅಂಶಗಳನ್ನು ಸೇರಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿ, ಪ್ರಕರಣ ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂದಿನ ವಾರ ಮಾನ್ವಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚಿರಿಕೆ ನೀಡಿದ್ದರು.
ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ತಂದೆ ಜಮದಗ್ನಿ ಚಿಕ್ಕದಿನ್ನಿ, ವಿದ್ಯಾರ್ಥಿ ತಾಯಿ ಗಂಗಮ್ಮ , ವಿದ್ಯಾರ್ಥಿ ಚಿಕ್ಕಪ್ಪ ಸೇರಿದಂತೆ SFI ಮುಖಂಡ ಲಿಂಗರಾಜ ಕಂದಗಲ್, ಜುನೈದ್ ಬಾಗ್ದಾದ್, ಚಂದ್ರಶೇಖರ ಯಲ್ಹೇರಿ ಸಿರವಾರ, ಮಿಥುನ್ ರಾಜ್. DYFI ಮುಖಂಡ ಸಿದ್ದಪ್ಪ ನಾಯಕ್ ಇದ್ದರು.