ಕಲಬುರಗಿ: ಅಳಂದ ತಾಲ್ಲೂಲಿನ ಭೂಸನೂರು ಎನ್ ಎಸ್ ಎಲ್ ಸಕ್ಕರೆ ಕಾರ್ಖಾನೆಯವರು ರೈತರ ಕಬ್ಬಿನ ಹಣವನ್ನು ನೀಡದೆ ನೂರಾರು ಕೋಟಿ ಬಾಕಿ ಉಳಿಸಿಕೊಂಡಿದ್ದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದ್ದರು.
ಅವರು ನಗದಲ್ಲಿ ಮಾಧ್ಯಮರೊಂದಿಗೆ ಮಾತನಾಡಿ ಎನ್.ಎಸ್.ಎಲ್ ಕಾರ್ಖಾನೆ ಕಾನೂನುಬಾಹಿರ ಆಗಿದ್ದರು, ಕಬ್ಬು ಬೆಳೆಗಾರರ ಹಣ ಕೊಡಿಸಲು ಹೋರಾಟ ಮಾಡಿದ ಧರ್ಮರಾಜ್ ಸಾವು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ, ಜಿಲ್ಲಾಡಳಿತ ತಕ್ಷಣವೇ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಂದು ಒತ್ತಾಯಿಸಿದ್ದರು.
ಜಿಲ್ಲಾಡಳಿತ ರೈತರ ಕಬ್ಬಿನ ಹಣ ಕೊಡಿಸಲು ಕಠಿಣ ಕ್ರಮ ಕೈಗೊಳ್ಳಬೇಕು, ಧರ್ಮರಾಜ್ ಸಾವು ಹೋರಾಟಕ್ಕೆ ರಾಜ್ಯದ ಎಲ್ಲಾ ಕಬ್ಬು ಬೆಳೆಗಾರರು ಬೆಂಬಲವಾಗಿದ್ದಾರೆ ಎಂದು ಶಾಂತಕುಮಾರ್ ಈ ಸಂದರ್ಭದಲ್ಲಿ ತಿಳಿಸಿದರು.