ಕಲಬುರಗಿ: ಕರ್ನಾಟಕ ರಾಜ್ಯ ಕಿರಿಯ, ಹಿರಿಯ ಆರೋಗ್ಯ ಸಹಾಯಕರ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಭೇಟಿ ನೀಡಿ ಆರೋಗ್ಯ ಸಹಾಯಕರ ಕುಂದುಕೊರತೆಗಳ ಕುರಿತು ಮನವಿ ಸಲ್ಲಿಸಲಾಯಿತು.
ಹಗಲಿರುಳು ಗ್ರಾಮೀಣ ಭಾಗದಲ್ಲಿ ದುಡಿಯುತ್ತಿದ್ದು ಕೆಲವು ಸೋಂಕಿತ ಪ್ರದೇಶದಲ್ಲಿ ಸೋಂಕಿತರು ಸೋಂಕಿತರ ಸಂಬಂಧಿಗಳು ಸಾರ್ವಜನಿಕರು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ತೊಂದರೆ ನೀಡಲಾಗುತ್ತಿದ್ದು, ಇದರಿಂದ ಸಿಬ್ಬಂದಿಗಳು ಭಯಭೀತಗೊಂಡು ವೃಂದಕ್ಕೆ ಹಾಗೂ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಸೂಕ್ತ ರಕ್ಷಣೆಯ ಒದಗಿಸುವ ಆಶ್ವಾಸನೆ ನೀಡಿದ್ದಾರೆಂದು ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ಪಾಟೇಲ್ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಯಾವುದೇ ಸೋಂಕಿತ ಪ್ರದೇಶಗಳಲ್ಲಿ ಹಲ್ಲೆಯಾಗದ ರೀತಿಯಲ್ಲಿ ನೋಡಿಕೊಳ್ಳಲು ವಿಶೇಷ ಅಧಿಕಾರಿಗಳನ್ನು ನಿಯೋಜಿಸುವ ಕಾರ್ಯ ಮಾಡಲಾಗುವುದೆಂದು ಡಿಸಿ ಭರವಸೆ ನೀಡಿದ್ದು, ಪ್ರತಿ ರವಿವಾರ ರಜೆ ಘೋಷಣೆ ಕುರಿತು ಸಹಕಾರತ್ಮಕವಾಗಿ ಸ್ಪಂದಿಸಿದ್ದಾರೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದರು.
ಸಂಘದ ರಾಜು ಧಾಬಿಮನಿ. ಸಂತೊಷ ಕಾಳಗಿ, ಗುಂಡಪ್ಪ ದೊಡ್ಡಮನಿ, ಗಣಪತಿ ವಿಂಭಡಶೆಟ್ಟಿ. ರೆವಣಸಿದ್ದಪ್ಪ ರುದ್ದನೂರ್, ನಾಗರಾಜ ಎಸ್, ವಿಜಯ ಕುಮಾರ್ ಕೆ, ಕಾಶಿನಾಥ ವೈ, ಶರಣು ಅರ್, ಜಯಪ್ರಕಾಶ್ ರೇವಶೇಟ್ಟಿ, ಇತರೆ ಆರೋಗ್ಯ ಸಹಾಯಕರು ಮನವಿ ಪತ್ರ ಸಲ್ಲಿಸಿದ್ದರು.