ಕೋವಿಡ್ ನಿಯಂತ್ರಣ ನಿಯಮ ಪಾಲಿಸದವರ ವರ್ತಕರ ಮೇಲೆ ಕ್ರಮ

0
29

ಸುರಪುರ: ನಗರದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಗ್ರೇಡ್-೨ ತಹಶೀಲ್ದಾರ ಸುಫೀಯಾ ಸುಲ್ತಾನಾ ಅವರ ಅಧ್ಯಕ್ಷತೆಯಲ್ಲಿ ನಗರದ ವರ್ತಕರ ಸಭೆ ಜರುಗಿತು.

ಸಭೆಯಲ್ಲಿ ನಗರಸಭೆ ಪೌರಾಯುಕ್ತ ಜೀವನ್‌ಕುಮಾರ ಕಟ್ಟಿಮನಿ ಮಾತನಾಡಿ ಮಾರಕ ಕೊರೋನಾ ಸೋಂಕು ಹರಡದಂತೆ ಕಡ್ಡಾಯವಾಗಿ ಮಾಸ್ಕ ಧರಿಸಲು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಲು ಪ್ರಚಾರದ ಮೂಲಕ ಸಾಕಷ್ಟು ರೀತಿಯಲ್ಲಿ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೆ ನಗರಸಭೆಯಿಂದ ತಿಳುವಳಿಕೆ ನೀಡಲಾಗುತ್ತಿದ್ದು, ಆದರೂ ಕೂಡಾ ನಗರದಲ್ಲಿ ಅಂಗಡಿಗಳ ಮುಂದುಗಡೆ ಜನದಟ್ಟಣೆಯಾಗಿ ಪ್ರತಿನಿತ್ಯ ವ್ಯಾಪಾರ ವಹಿವಾಟಿಗಾಗಿ ಬರುವ ಗ್ರಾಹಕರು ಮಾಸ್ಕ್ ಇಲ್ಲದೇ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಅಂಗಡಿಗಳಲ್ಲಿ ಖರೀದಿಯಲ್ಲಿ ತೊಡಗಿರುವುದು ಕಂಡು ಬಂದಿದೆ.

Contact Your\'s Advertisement; 9902492681

ಜಿಲ್ಲಾಧಿಕಾರಿ ಆದೇಶದ ಮೇರೆಗೆ ಇನ್ನು ಮುಂದೆ ವ್ಯಾಪಾರಸ್ಥರು ಅಂಗಡಿಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಹಾಗೂ ಗ್ರಾಹಕರಿಗೆ ಮಾಸ್ಕ ಧರಿಸಲು ತಿಳಿಸಬೇಕು ಒಂದು ವೇಳೆ ಪರಸ್ಪರ ಅಂತರವನ್ನು ಕಾಪಾಡಿಕೊಳ್ಳದೇ ಅಂಗಡಿಗಳಲ್ಲಿ ಜನದಟ್ಟಣೆ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಹಾಗೂ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು ಅಲ್ಲದೆ ಎಲ್ಲಾ ವರ್ತಕರು ತಮ್ಮ ತಮ್ಮ ಅಂಗಡಿಗಳಲ್ಲಿ ಕೊರೋನಾ ಕುರಿತು ಜಾಗೃತಿ ಮೂಡಿಸುವ ಫಲಕವನ್ನು ಹಾಕುವಂತೆ ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಉಪತಹಶೀಲ್ದಾರ ಸುಫೀಯಾ ಸುಲ್ತಾನಾ ಅವರು ಮಾತನಾಡಿ ಮಾರಕ ಕೊರೋನಾ ಸೋಂಕು ಸಮುದಾಯ ಮಟ್ಟದಲ್ಲಿ ಹಬ್ಬಿದಲ್ಲಿ ತುಂಬಾ ಅಪಾಯ ಎದುರಿಸಬೇಕಾಗುತ್ತದೆ, ಕಾರಣ ಈ ಸೋಂಕು ಹರಡದಂತೆ ತಡೆಯುವುದು ಜನರ ಕೈಯಲ್ಲಿದೆ ಅಲ್ಲದೆ ವ್ಯಾಪಾರಸ್ಥರು ಕೂಡಾ ತಮ್ಮ ಅಂಗಡಿಗಳಿಗೆ ಬರುವ ಗ್ರಾಹಕರಿಗೆ ಕಡ್ಡಾಯವಾಗಿ ಮಾಸ್ಕ ಧರಿಸಲು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮತ್ತು ಸ್ಯಾನಿಟೈಜರ್ ಬಳಸಲು ಜಾಗೃತಿ ಮೂಡಿಸುವುದು ಅಗತ್ಯ ಎಂದು ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಅನೇಕ ವರ್ತಕರು ಈ ಸಂದರ್ಭದಲ್ಲಿ ಮಾತನಾಡಿ ವರ್ತಕರಿಂದ ಜನದಟ್ಟಣೆ ತಡೆಯುವುದು ಅಸಾಧ್ಯ ಜನದಟ್ಟಣೆಯನ್ನು ತಡೆಯಬೇಕಾದರೆ ಪೋಲಿಸ್ ಇಲಾಖೆ ಹಾಗೂ ನಗರಸಭೆಯವರು ನಗರಕ್ಕೆ ವ್ಯಾಪಾರಕ್ಕೆ ಆಗಮಿಸುವ ಜನರನ್ನು ನಿಯಂತ್ರಿಸಿ ಒಳಗೆ ಬಿಡಲಿ ಎಲ್ಲದಕ್ಕೂ ವ್ಯಾಪಾರಸ್ಥರನ್ನು ಹೊಣೆ ಮಾಡಿದರೆ ಹೇಗೆ? ಎಂದು ತಮ್ಮ ಅಭಿಪ್ರಾಯವ್ಯಕ್ತಪಡಿಸಿದರು, ಅಲ್ಲದೆ ನಗರದ ಅನೇಕ ಕಡೆಗಳಲ್ಲಿ ಎಲ್ಲೆಂದರಲ್ಲಿ ರಸ್ತೆಯ ಬದಿಯಲ್ಲಿ ತರಕಾರಿ ಮಾರಾಟಗಾರರು ಹಾಗೂ ಬಂಡಿಗಳಲ್ಲಿ ಇನ್ನೀತರ ವಸ್ತುಗಳ ವ್ಯಾಪಾರ ವಹಿವಾಟು ನಡೆಯುತ್ತಿದ್ದು ಇದನ್ನು ನಿಯಂತ್ರಿಸಬೇಕು ಅಂದಾಗ ಜನದಟ್ಟಣೆ ತಡೆಯಬಹುದು ಎಂದರು.

ಪಿ.ಎಸ್.ಐ. ಚಂದ್ರಶೇಖರ ನಾರಾಯಣಪುರ ವೇದಿಕೆಯಲ್ಲಿದ್ದರು, ನಗರದ ವರ್ತಕರಾದ ಕಮಲಕಿಶೋರ ರಾಠಿ, ರಾಕೇಶ ಹಂಚಾಟೆ, ಸಂಜಯ ಜೈನ, ರಾಜಾರಾಮ ರಾಠಿ, ಬದ್ರಿನಾರಾಯಣ ರಾಠಿ, ಸಂತೋಷ ಬಾರಿ, ಸೇರಿದಂತೆ ಬಟ್ಟೆ, ಕಿರಾಣಿ ಹಾಗೂ ಇನ್ನೀತರ ವರ್ತಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here