ಶಹಾಬಾದ: ರಾಜ್ಯದಲ್ಲಿ ೭೦ ಲಕ್ಷ ಕೋಲಿ ಸಮಾಜದ ಜನಸಂಖ್ಯೆ ಹೊಂದಿದ್ದು, ನಮ್ಮ ಸಮಾಜಕ್ಕೆ ರಾಜಕೀಯವಾಗಿ ಸೂಕ್ತ ಪ್ರಾತಿನಿಧ್ಯ ನೀಡಲೇಬೆಕೆಂದು ತೊನಸನಳ್ಳಿ (ಎಸ್) ಅಲ್ಲಮಪ್ರಭು ಸಂಸ್ಥಾನದ ಪೀಠಾಧಿಪತಿ ಮಲ್ಲಣ್ಣಪ್ಪ ಮಹಾಸ್ವಾಮಿಗಳು ಆಗ್ರಹಿಸಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಡಳಿತ ಪಕ್ಷವಾದ ಬಿಜೆಪಿ ಬಾಬುರಾವ ಚಿಂಚನಸೂರ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದಲ್ಲದೇ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ೫೦ ಕೋ.ರೂ. ಅನುದಾನ ಸರ್ಕಾರ ನೀಡಿರುವುದದಕ್ಕೆ ಅಭಿನಂದನೆಗಳು ಸಲ್ಲಿಸುತ್ತೆವೆ. ಅದೇ ರೀತಿ ಸಮಾಜದ ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ ಅವರಿಗೆ ಸಚಿವ ಸ್ಥಾನ ನೀಡಬೇಕು. ವಿಧಾನ ಪರಿಷತ್‌ನಲ್ಲಿ ಖಾಲಿ ಆಗುತ್ತಿರುವ ಸ್ಥಾನಕ್ಕೆ ಕೋಲಿ ಸಮಾಜಕ್ಕೆ ಬಿಜೆಪಿ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷ ಈಗ ನಿವೃತ್ತರಾದ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ವಿಧಾನ ಪರಿಷತ್ ಸ್ಥಾನದಲ್ಲಿ ಮುಂದುವರೆಸಬೇಕೆಂದು ಆಗ್ರಹಿಸಿದರು.
ಅಲ್ಲಮಪ್ರಭು ಪೀಠ ಜಾತ್ಯಾತೀತ ಮಠವಾಗಿದ್ದು, ಜಾತ್ಯಾತೀತ ನಿಲುವನ್ನು ಹೊಂದಿದ್ದು, ಎಲ್ಲಾ ಸಮುದಾಯದ ಕೊಡಬೇಕಾದ ಸವಲತ್ತುಗಳು, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತ ಬಂದಿದೆ. ಸದ್ಯ ನಮ್ಮ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುವ ಕಾರ್ಯ ಸರ್ಕಾರಗಳಿಂದ ನೆನೆಗುದಿಗೆ ಬಿದ್ದಿದ್ದು, ರಾಜಕೀಯ, ಸಾಮಾಜಿಕ ಸೇವಕರಿಗೆ ಸಿಗಬೇಕಾದ ಮಂತ್ರಿ ಸ್ಥಾನ, ನಿಗಮ ಮಂಡಳಿ ಸ್ಥಾನ ಸಿಗುತ್ತಿಲ್ಲ.ಆದ್ದರಿಂದ ನಮ್ಮ ಸಮಾಜದ ಮುಖಂಡರಿಗೆ ಈ ಸ್ಥಾನಗಳನ್ನು ನೀಡಲೆಬೇಕೆಂದು ಒತ್ತಾಯಿಸಿದರು.
ತಾಪಂ.ಮಾಜಿ ಸದಸ್ಯ ನಿಂಗಣ್ಣ ಹುಳಗೋಳ, ಗ್ರಾಪಂ.ಮಾಜಿ ಸದಸ್ಯ ಬಸವರಾಜ ಗೊಳೇದ್, ಗ್ರಾಪಂ ಮಾಜಿ ಸದಸ್ಯ ನಾಗೇಂದ್ರ ನಾಟೀಕಾರ, ಮಹಾಲಿಂಗಪ್ಪ ಮದ್ರಕಿ, ಮಲ್ಲಿಕಾರ್ಜುನ ನಾಟೀಕಾರ, ಅಶೋಕ ನಾಟೀಕಾರ, ಮಲ್ಲಣ್ಣಗೌಡ ಬುಟ್ನಾಳ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.