ಪ್ರತಿಯೊಂದು ಗ್ರಾಮ ಸರ್ವಾಂಗೀಣ ಅಭಿವೃದ್ಧಿ ನನ್ನ ಮುಖ್ಯ ಧ್ಯೇಯ: ಪಾಟೀಲ

0
23
ಅಫಜಲಪುರ: ಪ್ರತಿಯೊಂದು ಹಳ್ಳಿಯ ಸರ್ವಾಂಗೀಣ ಅಭಿವೃದ್ಧಿ ‌ಮಾಡಲು ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದೇನೆ ಎಂದು ಶಾಸಕರಾದ ಎಂ ವೈ.ಪಾಟೀಲ ಅಭಿಪ್ರಾಯ ಪಟ್ಟರು.
ತಾಲ್ಲೂಕಿನ ಹಸನಾಪೂರ ಗ್ರಾಮದಲ್ಲಿ ಪರಿಶಿಷ್ಟ ಪಂಗಡ ಓಣಿಯಲ್ಲಿ ಸುಮಾರು 50. ಲಕ್ಷ. ರೂಪಾಯಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಯನ್ನು ಶಂಕುಸ್ಥಾಪನೆ ಮಾಡಿ ಮಾತನಾಡಿದ ಅವರು, ತಾಲೂಕಿನಲ್ಲಿ ಬರುವ ಪ್ರತಿಯೊಂದು ಗ್ರಾಮಗಳಲ್ಲಿಯೂ ಒಳಚರಂಡಿ, ಸಿಸಿ ರಸ್ತೆ ಹಾಗೂ ನೂತನ ಶಾಲಾ ಕಟ್ಟಡ ಕಾಮಗಾರಿಗಳು ಮಾಡುವುದರ ಮೂಲಕ ಶಾಸಕರಾಗಿ ಎರಡು ವರ್ಷದಲ್ಲಿ ಸುಮಾರು ಎರಡು ಸಾವೀರ ಕೋಟಿ ಅನುದಾನ ತಂದು ತಾಲೂಕು ಅಭಿವೃದ್ಧಿ ಪಡಿಸುತ್ತಿದ್ದೇನೆ ಎಂದು ಪಾಟೀಲರು ತಿಳಿಸಿದರು.
ಗ್ರಾಮದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಜನರಿಗೆ ತಲಾ ಎರಡೆರಡು ಎಕರೆ ಭೂಮಿಯನ್ನು ತಮ್ಮ ಸಮುದಾಯದ ಏಳ್ಗೆಗಾಗಿ ಮಂಜೂರಾತಿ ಮಾಡಿಸಿಕೊಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಫರಹತಬಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಸುರೇಶ್ ತಿಬಶೆಟ್ಟಿ, ತಾ.ಪಂ.ಸದಸ್ಯೆ ಶ್ರೀಮತಿ  ಅಂಬಿಕಾ ಶರಣಗೌಡ,ಗ್ರಾ.ಪಂ.ಅಧ್ಯಕ್ಷ ಚೆನ್ನು ಬುಳ್ಳಾ,ಮಾಜಿ ತಾ.ಪಂ.ಸದಸ್ಯರಾದ ಸೀತಾರಾಮ ಸುಬೇದಾರ್,ಸಾಯಿಬಣ್ಣಾ ಪೂಜಾರಿ, ಗ್ರಾ.ಪಂ.ಸದಸ್ಯರಾದ ಖಜಾಸಾಬ ಫರಹತಾಬಾದ,ಚೆನ್ನುಗೌಡ ನಡುವಿನಹಳ್ಳಿ, ಸಾಯಿಬಣ್ಣಾ ಹಾಗೂ ಇನ್ನಿತರ ಸುತ್ತಲಿನ ಗ್ರಾಮದ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here