ಶಹಾಪುರ: ಕೊರಾನ ವೈರಸ್ ನಿಂದ ಇಡೀ ದೇಶವೇ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ತೆರಳಿ ಪಾಠ ಮಾಡುತ್ತಿರುವುದು ವಿಶೇಷವಾಗಿ ಕಂಡು ಬಂತು ತಾಲ್ಲೂಕಿನ ದೋರನಹಳ್ಳಿ ಗ್ರಾಮದ ವಿದ್ಯಾರ್ಥಿನಿಯರಾದ ಸವಿತಾ ಮತ್ತು ರೂಪಾ ಅವರ ಮನೆಗೆ ತೆರಳಿ ಪಾಠ ಮಾಡಲಾಯಿತು.
ಮೊರಾರ್ಜಿ ದೇಸಾಯಿ ಗೋರೆಗುಡ್ಡ ವಸತಿ ಶಾಲೆಯ ಶಿಕ್ಷಕರು ಹತ್ತನೇ ತರಗತಿಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಮ್ಮ ನಡೆ ವಿದ್ಯಾರ್ಥಿಗಳ ಮನೆಯ ಕಡೆ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಪ್ರತಿ ದಿನ ಐದು ವಿದ್ಯಾರ್ಥಿಗಳ ಮನೆಗೆ ತೆರಳಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಕಠಿಣವಾದ ಹಾಗೂ ಗೊಂದಲವಿದ್ದ ವಿಷಯಗಳ ಕುರಿತು ವಿವರವಾಗಿ ತಿಳಿಸುತ್ತಿರುವ ಶಿಕ್ಷಕರ ಕಾರ್ಯ ಶ್ಲಾಘನೀಯವಾದದ್ದು.
ಹತ್ತನೇ ತರಗತಿ ಪರೀಕ್ಷೆ ಸಮೀಪಿಸುತ್ತಿರುವುದರಿಂದ ಗಣಿತ ಇಂಗ್ಲಿಷ್ ಕನ್ನಡ ಮತ್ತು ಇನ್ನಿತರ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಮನನ ಮಾಡಿಕೊಡಲಾಗುತ್ತಿದೆ ಎನ್ನುತ್ತಾರೆ ಶಿಕ್ಷಕರಾದ ಮಡಿವಾಳಪ್ಪ ಪಾಟೀಲ ಹೆಗ್ಗನದೊಡ್ಡಿ,ಬಸವರಾಜ್, ಶರಣಬಸಯ್ಯ ಹಿರೇಮಠ.