ರಾಜ್ಯ ಸರ್ಕಾರಿ ನೌಕರರ ಸಮಸ್ಯೆ ನಿವಾರಣೆ: ಜಂಟಿ ಸಮಾಲೋಚನಾ ಸಭೆ ಕರೆಗೆ ಮನವಿ

0
53

ಕಲಬುರಗಿ: ಜಿಲ್ಲಾ ಮತ್ತು ತಾಲ್ಲೂಕಾ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯ ಸರ್ಕಾರಿ ನೌಕರರು ಕಾರ್ಯನಿರ್ವಹಣೆ ಸಂದರ್ಭದಲ್ಲಿ ಎದುರಿಸುವಂತಹ ಸಮಸ್ಯೆಗಳು, ಕುಂದುಕೊರತೆಗಳು ಹಾಗೂ ಸೇವಾ ಸೌಲಭ್ಯ ಕುರಿತು ಸ್ಪಂದಿಸಲು ಸರ್ಕಾರವು ದಿ.೧೯-೧೨-೨೦೧೯ ರಂದು ಆಯಾ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿಯನ್ನು ರಚಿಸಿದ್ದು, ಶೀಘ್ರದಲ್ಲಿಯೆ ಜಂಟಿ ಸಮಾಲೋಚನಾ ಸಮಿತಿಯ ಸಭೆ ಕರೆಯುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ ಅವರು ಜಿಲ್ಲಾಧಿಕಾರಿ ಶರತ್ ಬಿ. ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದ್ದಾರೆ.

Contact Your\'s Advertisement; 9902492681

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿ?ಧಿಕಾಳು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ನೌಕರರ ಪ್ರತಿನಿಧಿಯಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಎಲ್ಲಾ ತಾಲೂಕಿನ ಅಧ್ಯಕ್ಷರು ಸದಸ್ಯರಾಗಿದ್ದು, ಅಪರ ಜಿಲ್ಲಾಧಿಕಾರಿಗಳು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಸರ್ಕಾರಿ ನೌಕರರ ಮೇಲಿನ ಹಲ್ಲೆಗೆ ನೌಕಕರ ಸಂಘ ಖಂಡನೆ

ಕೋವಿಡ್-೧೯ ನಿಯಂತ್ರಣ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಕಳೆದ ಜೂನ್ ೧೫ ರಂದು ಕಮಲಾಪೂರ ತಾಲೂಕಿನ ಮರಮಂಚಿ ಮತ್ತು ಚಿಂಚೋಳಿ ತಾಲೂಕಿನ ಪಸ್ತಾಪುರ ಗ್ರಾಮದಲ್ಲಿ ಮಾರಣಾಂತಿಕ ಹಲ್ಲೆ ಮಾಡಿರುವುದನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕವು ತೀವ್ರವಾಗಿ ಖಂಡಿಸಿದೆ.

ಈ ಸಂಬಂಧ ಕರ್ತವ್ಯದಲ್ಲಿದ್ದ ನೌಕರರ ಮೇಲೆ ಹಲ್ಲೆ ಮಾಡಿರುವವರನ್ನು ಕೂಡಲೆ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಗುರುವಾರ ಸಲ್ಲಿಸಿರುವ ಮನವಿ ಪತ್ರದಲ್ಲಿ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಅವರು ಒತ್ತಾಯಿಸಿದ್ದಾರೆ.

ಇಂತಹ ಕೃತ್ಯಗಳಿಂದ ಸರ್ಕಾರಿ ನೌಕರರನ್ನು ಅಸಹಾಯಕರನ್ನಾಗಿಸಿದಲ್ಲದೆ ನೌಕರರಿಗೆ ರಕ್ಷಣೆ ಇಲ್ಲದಂತಾಗಿ ಭಯದ ವಾತಾವರಣ ಮೂಡಿದೆ. ಆದರಿಂದ ಹಲ್ಲೆ ಮಾಡಿದವರನ್ನು ಶೀಘ್ರವೆ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವ ಮೂಲಕ ನೌಕರರ ಮನೋಬಲ ಹೆಚ್ಚಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕೋವಿಡ್-೧೯ ಹಿನ್ನೆಲೆಯಲ್ಲಿ ಕಳೆದ ೩ ತಿಂಗಳಿಂದ ಆರೋಗ್ಯ ಇಲಾಖೆಯ ಅಧಿಕಾರಿ-ನೌಕರರು ಯಾವುದೇ ರಜೆ ಪಡೆಯದೇ ನಿರಂತರವಾಗಿ ಕರ್ತವ್ಯ ನಿರ್ವಹಿಸಿಸುತ್ತಿದ್ದು, ಇವರ ಆರೋಗ್ಯದ ಹಿತದೃಷ್ಠಿಯಿಂದ ಪರ್ಯಾ ವ್ಯವಸ್ಥೆ ಕಲ್ಪಿಸಿ ಸೂಕ್ತ ರಜೆ ನೀಡಲು ಕ್ರಮವಹಿಸಬೇಕು ಎಂದು ಅವರು ಪತ್ರದಲ್ಲಿ ಕೇಳಿಕೊಂಡಿದ್ದಾರೆ.

ಕೋವಿಡ್-೧೯ರ ಪರೀಕ್ಷೆಗೆ ಗಂಟಲು ದ್ರವವನ್ನು ಮೈಕ್ರೋಬಾಯಲೋಜಿಸ್ಟ್, ಇ.ಎನ್.ಟಿ. ಸ್ಪೆಷಲಿಸ್ಟ್ ಅಥವಾ ಸ್ನಾತಕ್ಕೋತ್ತರ ಪರೀಕ್ಷಾರ್ಥ ಅಭ್ಯರ್ಥಿಗಳಿಂದ ಸಂಗ್ರಹಿಸಬೇಕು ಎಂದು ಸರ್ಕಾರದ ಆದೇಶವಿದ್ದರು ಜಿಲ್ಲೆಯಲ್ಲಿ ಕಳೆದ ೩ ತಿಂಗಳಂದ ಪ್ರಯೋಗಶಾಲಾ ತಂತ್ರಜ್ಞರಿಂದಲೆ ಈ ಕಾರ್ಯನಿರ್ವಹಿಸುತ್ತಿದ್ದು, ಇದನ್ನು ತಪ್ಪಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಇದಲ್ಲದೆ ಕೋವಿಡ್-೧೯ ಪರೀಕ್ಷೆಗಾಗಿ ಖಾಸಗಿ ಕ್ಲೀನಿಕ್, ಆಸ್ಪತ್ರೆಗಳಿಗೆ ಹೋಗಿ ಗಂಟಲು ದ್ರವ ಪಡೆಯಬೇಕು ಎಂದು ಸೂಚಿಸಿರುವುದು ನೌಕರರ ಮೇಲೆ ವಿಪರೀತ ಒತ್ತಡ ಹೇರಿದಂತಾಗಿದ್ದು, ಇದರ ಬದಲಾಗಿ ನಿಗಧಿತ ೪ ಕೇಂದ್ರಗಳನ್ನು ಗುರುತಿಸಿ ಅಲ್ಲಿ ಗಂಟಲು ಸಂಗ್ರಹಣೆಗೆ ಅವಕಾಶ ಮಾಡಿಕೊಟ್ಟಿದಲ್ಲಿ ಆರೋಗ್ಯ ಸಿಬ್ಬಂದಿ ಮತ್ತು ರೋಗಿಗಳಿಗೆ ಅನುಕೂಲವಾಗಲಿದೆ ಎಂದು ರಾಜು ಲೇಂಗಟಿ ಅವರು ಮನವಿ ಪತ್ರದಲ್ಲಿ ಕೋರಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here