ಕಲಬುರಗಿ: ಭಾನುವಾರ ಸಂಭವಿಸುವ ಸೂರ್ಯಗ್ರಹಣ ಸಮಯದಲ್ಲಿ ಮೂಢನಂಬಿಕೆಯಿAದ ವಿಕಲಚೇತನ ಮಕ್ಕಳನ್ನು ಜಿಲ್ಲೆಯಾದ್ಯಂತ ಭೂಮಿಯಲ್ಲಿ ಹೂಳದಂತೆ ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ಇದನ್ನು ಉಲ್ಲಂಘಿಸಿ ಸಾರ್ವಜನಿಕರು ಯಾರಾದರು ವಿಕಲಚೇತನ ಮಕ್ಕಳನ್ನು ಭೂಮಿಯಲ್ಲಿ ಹೂಳಿದಲ್ಲಿ ಅಂತವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಶನಿವಾರ ಈ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಈ ಸಂಬAಧ ಸಾರ್ವಜನಿಕರು ಅವೈಜ್ಞಾನಿಕವಾದ ಹೂಳುವ ರೂಢಿಯನ್ನು ಕೈಬಿಡಬೇಕು. ಕಳೆದ ವರ್ಷದ ಕಲಬುರಗಿ ನಗರದ ತಾಜ ಸುಲ್ತಾನಪೂರದಲ್ಲಿ ಇದೇ ರೀತಿಯ ಪ್ರಕರಣ ವರದಿಯಾಗಿದ್ದು, ಜಿಲ್ಲಾಡಳಿತದ ಗಮನಕ್ಕಿದೆ. ಭಾನುವಾರ ನಡೆಯುವ ಸೂರ್ಯಗ್ರಹಣ ದಿನದಂದು ಯಾವುದೇ ಕಾರಣಕ್ಕೂ ಇದು ಮರುಕಳಿಸಬಾರದೆಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಸಂಬAಧ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ತಹಶೀಲ್ದಾರರಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಇದೆಲ್ಲದರ ನಡುವೆ ಶನಿವಾರ ಜಿಲ್ಲೆಯಾದ್ಯಂತ ತಾಲೂಕಾ ಪ್ರದೇಶ, ಪಟ್ಟಣ, ಗ್ರಾಮಗಳಲ್ಲಿ ಮೂಢನಂಬಿಕೆಯ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಮಹಾರಾಷ್ಟ ಪ್ರವಾಸ ಹಿನ್ನೆಲೆಯ ಮಕ್ಕಳಿಗೆ ಪ್ರತ್ಯೇಕ ಕೋಣೆ: ಇದೇ ಜೂನ್ ೨೫ ರಿಂದ ಜುಲೈ ೪ರ ವರೆಗೆ ನಡೆಯುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಕಂಟೇನ್‌ಮೆAಟ್ ಝೋನ್ ಮತ್ತು ಮಹಾರಾಷ್ಟç ಪ್ರವಾಸ ಹಿನ್ನೆಲೆಯ ವಿದ್ಯಾರ್ಥಿಗಳು ಹಾಜರಾದಲ್ಲಿ, ಅವರಿಗೆ ಪ್ರತ್ಯೇಕವಾದ ಕೋಣೆಯಲ್ಲಿ ಕೂರಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುತ್ತದೆ. ಇದಕ್ಕಾಗಿ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ೨ ಕೋಣೆ ಕಾಯ್ದಿರಿಸಲಾಗಿದೆ ಎಂದು ಶರತ್ ಬಿ. ತಿಳಿಸಿದರು.
ಪರೀಕ್ಷೆಗೆ ಬರುವ ಎಲ್ಲಾ ಮಕ್ಕಳಿಗೆ ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಧರಿಸುವಿಕೆ, ಥರ್ಮಲ್ ಸ್ಕಿçÃನ್ ಸ್ಕಾö್ಯನಿಂಗ್ ಸೇರದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇದಕ್ಕಾಗಿ ಪರೀಕ್ಷಾ ಕ್ಳೆಂದ್ರದಲ್ಲಿ ಆರೋಗ್ಯ ತಂಡ ನಿಯೋಜಿಸಲಾಗುತ್ತದೆ. ಮುಂಜಾಗ್ರತವಾಗಿ ಎಲ್ಲಾ ಸಾರಿಗೆ ಬಸ್‌ಗಳನ್ನು ಸಹ ಸ್ಯಾನಿಟೈಸ್ ಮಾಡಲು ಸಾರಿಗೆ ಸಂಸ್ಥೆಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ೨೪೪೬ ಜನ: ಕೊರೋನಾ ಹಿನ್ನೆಲೆಯಲ್ಲಿ ವಿವಿಧ ರಾಜ್ಯದಿಂದ ಜಿಲ್ಲೆಗೆ ಇದೂವರೆಗೆ ಆಗಮಿಸಿದ ೪೩೧೨೭ ಪೈಕಿ ೪೦೬೮೦ ಜನರನ್ನು ಬಿಡುಗಡೆ ಮಾಡಲಾಗಿದ್ದು, ಪ್ರಸ್ತುತ ೨೪೪೬ ಜನರು ಮಾತ್ರ ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಮಾಹಿತಿ ನೀಡಿದರು.